ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ರವಾನೆ

ಬೆಳಗಾವಿಯ ಕೆಎಲ್‌ಇ ಫಾರ್ಮಸಿ ಕಾಲೇಜಿನಲ್ಲಿ ಬುಧವಾರ ಜರುಗಿದ ಕಾರ್ಯಾಗಾರದ ಉದ್ಘಾಟನೆಯಲ್ಲಿ ಡಾ.ಬಿ.ಶ್ರೀನಿವಾಸ ಪ್ರಸಾದ ಡಾ.ಸುನೀಲ ಎಸ್.ಜಲಾಲಪುರೆ ಡಾ.ವಿ.ಎಸ್.ಮಸ್ತಿಹೊಳಿಮಠ, ಡಾ.ಗೀತಾಂಜಲಿ ಸಾಲಿಮಠ ಇತರರಿದ್ದರು.
ಬೆಳಗಾವಿಯ ಕೆಎಲ್‌ಇ ಫಾರ್ಮಸಿ ಕಾಲೇಜಿನಲ್ಲಿ ಬುಧವಾರ ಜರುಗಿದ ಕಾರ್ಯಾಗಾರದ ಉದ್ಘಾಟನೆಯಲ್ಲಿ ಡಾ.ಬಿ.ಶ್ರೀನಿವಾಸ ಪ್ರಸಾದ ಡಾ.ಸುನೀಲ ಎಸ್.ಜಲಾಲಪುರೆ ಡಾ.ವಿ.ಎಸ್.ಮಸ್ತಿಹೊಳಿಮಠ, ಡಾ.ಗೀತಾಂಜಲಿ ಸಾಲಿಮಠ ಇತರರಿದ್ದರು.
Published on
ಬೆಳಗಾವಿ : ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದ ಬಗ್ಗೆ ತಪ್ಪು ಮಾಹಿತಿ ಹಂಚಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಸರಿಯಾದ ವೈಜ್ಞಾನಿಕ ಜ್ಞಾನವಿಲ್ಲದವರು ಆರೋಗ್ಯ ಪ್ರಯೋಜನಗಳ ಬಗ್ಗೆ ದಾರಿತಪ್ಪಿಸುವ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಕಾಹೆರ ಸಮಗ್ರ ವೈದ್ಯಕೀಯ, ಕ್ಲಿನಿಕಲ್ ಸೇವೆಗಳು ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ.ಶ್ರೀನಿವಾಸ ಪ್ರಸಾದ ಕಳವಳ ವ್ಯಕ್ತಪಡಿಸಿದರು.
ಕೆಎಲ್‌ಇ ಫಾರ್ಮಸಿ ಮಹಾವಿದ್ಯಾಲಯದ ಔಷಧ ಗುಣಮಟ್ಟ ಭರವಸೆ ವಿಭಾಗವು, ಡಿಪಾರ್ಟ್‌ಮೆಂಟ್ ಆಫ್ ಫಾರ್ಮಸಿ ಎಜುಕೇಶನ್ ಆಶ್ರಯದಲ್ಲಿ ‘ಯೋಚಿಸಿ ಚರ್ಚಿಸಿ ಹಂಚಿಕೊಳ್ಳಿ: ಸಾಮಾಜಿಕ ಮತ್ತು ನೆಟ್‌ವರ್ಕಿಂಕ್ ವೇದಿಕೆಗಳ ಪಾತ್ರ’ ಎಂಬ ವಿಷಯವಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪರಿಶೀಲಿಸದ ಆರೋಗ್ಯ ಹಕ್ಕುಗಳನ್ನು ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ವ್ಯಕ್ತಿಗಳ ಪ್ರಭಾವ ಹೆಚ್ಚುತ್ತಿರುವ ಈ ದಿನಗಳಲ್ಲಿ ವೈದ್ಯಕೀಯ ಮತ್ತು ಫಾರ್ಮಸಿ ವಿದ್ಯಾರ್ಥಿಗಳು ತುಂಬಾ ಎಚ್ಚರಿಕೆ ವಹಿಸಬೇಕಿದೆ. ಆರೋಗ್ಯ ಸಂಬಂಧಿತ ಮಾಹಿತಿ ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ಮೊದಲು ಅಧಿಕೃತ, ಪುರಾವೆ, ಮೂಲಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಕೆಎಲ್‌ಇ ಫಾರ್ಮಸಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುನೀಲ ಎಸ್.ಜಲಾಲಪುರೆ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಿದಾಗ ಕಲಿಕೆ, ವೃತ್ತಿಪರ ಬೆಳವಣಿಗೆ ಮತ್ತು ಸಂವಹನಕ್ಕೆ ಶಕ್ತಿಶಾಲಿ ಸಾಧನಗಳಾಗಬಹುದು. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮಾಹಿತಿಯ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅವರ ಶೈಕ್ಷಣಿಕ ಮತ್ತು ವೃತ್ತಿ ಅಭಿವೃದ್ಧಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನೈತಿಕವಾಗಿ ಮತ್ತು ಉತ್ಪಾದಕವಾಗಿ ಬಳಸಬೇಕು ಎಂದು ಹೇಳಿದರು.
ಪರಿಣಿತರಾದ ಸೈಬರ್ ಅಪರಾಧ ಠಾಣೆ ಪಿಎಸ್‌ಐ ಸುಮನ ಪವಾರ, ಡಾ.ಸುರೇಶ ಶೆಣವಿ ಹಾಗೂ ಸುಹಾಸ ರಾಜಪೂತ ಉಪನ್ಯಾಸ ನೀಡಿದರು. ಫಾರ್ಮಸಿ ವಿಭಾಗದ ಡೀನ್ ಡಾ.ವಿ.ಎಸ್.ಮಸ್ತಿಹೊಳಿಮಠ, ಉಪಪ್ರಾಂಶುಪಾಲ ಡಾ.ಎಂ.ಬಿ.ಪಾಟೀಲ, ಡಾ.ಗೀತಾಂಜಲಿ ಸಾಲಿಮಠ, ಡಾ.ಅಂಜನಾ ಅಧ್ಯಾಪಕ ಹಾಗೂ ವಿವಿಧ ಫಾರ್ಮಸಿ ಶಿಕ್ಷಣ ಸಂಸ್ಥೆಗಳ ಸುಮಾರು 70ಕ್ಕೂ ಹೆಚ್ಚು ಅಧ್ಯಾಪಕರು ಪಾಲ್ಗೊಂಡಿದ್ದರು.
ಔಷಧ ಗುಣಮಟ್ಟ ಭರವಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಿಶಾ ಶಿರ್ಕೋಳಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ಭುವನೇಶ್ವರಿ ಶರಣ್ಣವರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net