ಆರೋಗ್ಯಕರ ಜೀವಕ್ಕೆ ಕ್ರೀಡೆ ಮುಖ್ಯ

ಬೆಳಗಾವಿಯಲ್ಲಿ ಜರುಗಿದ ಕೆಎಲ್ಇ ಫಾರ್ಮಸಿ ಕಾಲೇಜಿನ ಕ್ರೀಡಾಕೂಟದಲ್ಲಿ ಡಾ.ಸುಚಿತ್ರಾ ಬ್ಯಾನರ್ಜಿ ಕುರುಂದಕರ, ಡಾ.ಸುನೀಲ ಜಲಾಲಪುರೆ, ಡಾ.ಎಂ.ಬಿ.ಪಾಟೀಲ, ಡಾ.ವಿ.ಎಸ್.ಮಾಸ್ತಿಹೋಳಿಮಠ ಇತರರು ಕ್ರೀಡಾಜ್ಯೋತಿ ಸ್ವೀಕರಿಸಿದರು.
ಬೆಳಗಾವಿಯಲ್ಲಿ ಜರುಗಿದ ಕೆಎಲ್ಇ ಫಾರ್ಮಸಿ ಕಾಲೇಜಿನ ಕ್ರೀಡಾಕೂಟದಲ್ಲಿ ಡಾ.ಸುಚಿತ್ರಾ ಬ್ಯಾನರ್ಜಿ ಕುರುಂದಕರ, ಡಾ.ಸುನೀಲ ಜಲಾಲಪುರೆ, ಡಾ.ಎಂ.ಬಿ.ಪಾಟೀಲ, ಡಾ.ವಿ.ಎಸ್.ಮಾಸ್ತಿಹೋಳಿಮಠ ಇತರರು ಕ್ರೀಡಾಜ್ಯೋತಿ ಸ್ವೀಕರಿಸಿದರು.
Published on
ಬೆಳಗಾವಿ: ಆರೋಗ್ಯಕರ ಜೀವನ ಶೈಲಿ ಕಾಪಾಡಿಕೊಳ್ಳುವಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆ ಮಹತ್ವವಾಗಿದೆ. ನಿಯಮಿತ ವ್ಯಾಯಾಮ ದೇಹವನ್ನು ಸದೃಢವಾಗಿರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ಕಾಹೇರ್ ಸಂಶೋಧನಾ ಮತ್ತು ಅಭಿವೃದ್ಧಿ ನಿರ್ದೇಶಕಿ ಡಾ.ಸುಚಿತ್ರಾ ಬ್ಯಾನರ್ಜಿ ಕುರುಂದಕರ ಹೇಳಿದರು.
ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿ, ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟವನ್ನು ಧ್ವಜಾರೋಹಣದೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಮತ್ತು ಕ್ರೀಡೆ ನಿಕಟ ಸಂಬಂಧ ಹೊಂದಿವೆ. ಎರಡೂ ಕ್ಷೇತ್ರಗಳಲ್ಲಿ, ಯಶಸ್ಸು ಸುಲಭವಾಗಿ ಬರುವುದಿಲ್ಲ. ಅನೇಕ ವೈಫಲ್ಯಗಳಾಗಬಹುದು. ಆದರೆ ನಿರಂತರ ಅಭ್ಯಾಸ, ತಾಳ್ಮೆ ಮತ್ತು ಕಠಿಣ ಪರಿಶ್ರಮವು ಸುಧಾರಣೆ ಮತ್ತು ಸಾಧನೆಗೆ ಕಾರಣವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸುನೀಲ ಜಲಾಲಪುರೆ ಮಾತನಾಡಿ, ವಿದ್ಯಾರ್ಥಿಗಳು ಫಿಟ್‌ನೆಸ್‌ನ್ನು ತಮ್ಮ ದಿನಚರಿಯ ಭಾಗವಾಗವನ್ನಾಗಿಸಿಕೊಳ್ಳಬೇಕು. ಉತ್ತಮ ಆರೋಗ್ಯವು ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಅಡಿಪಾಯವಾಗಿದೆ. ನಾವೀನ್ಯತೆ ಮತ್ತು ವೈಜ್ಞಾನಿಕ ಪ್ರಗತಿಗೆ ಆರೋಗ್ಯಕರ ದೇಹ ಮತ್ತು ಮನಸ್ಸು ಅತ್ಯಗತ್ಯ ಎಂದು ತಿಳಿಸಿದರು.
ಉಪಪ್ರಾಂಶುಪಾಲ ಡಾ.ಎಂ.ಬಿ.ಪಾಟೀಲ, ಡೀನ್ ಡಾ.ವಿ.ಎಸ್.ಮಾಸ್ತಿಹೋಳಿಮಠ, ಇತರಿದ್ದರು. ಆಕರ್ಷ ತುರಮುರಿ ಸ್ವಾಗತಿಸಿದರು. ಕಿರಣ ಗಾಯಕವಾಡ ಪರಿಚಯಿಸಿದರು. ಸುಪ್ರೀತ ಉದಪುಡಿ ವಂದಿಸಿದರು.
ವಿವಿಧ ವಿಭಾಗದ ಓಟ, ರೀಲೆ, ಶಾಟ್‌ಪುಟ್, ಚಕ್ರ ಎಸೆತ, ಚಾವಲಿನ್ ಥ್ರೋ, ಉದ್ದ ಜಿಗಿತ, ಟ್ರಿಬಲ್ ಜಂಪ್ ಸೇರಿದಂ ಟ್ರಾೃಕ್ ಸ್ಪರ್ಧೆಯಲ್ಲಿ ಡಿ. ಫಾರ್ಮ್, ಬಿ.ಫಾರ್ಮ್, ಎಂ.ಫಾರ್ಮ್ ಮತ್ತು ಫಾರ್ಮ್ ಡಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net