ಮಮದಾಪುರ: ಇಂಚಗೇರಿ ಮಠ ಸರ್ವಧರ್ಮಿಯರು ಆರಾಧಿಸುವ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಬಸವಣ್ಣನವರ ಮಾರ್ಗದಲ್ಲಿ ನಡೆದ ಮಾಧವಾನಂದರು ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಸ್ಥಳೀಯ ಚರಮೂರ್ತೀಶ್ವರ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀ ಮಾಧವಾನಂದ ಆಶ್ರಮದಲ್ಲಿ ಇಂಚಗೇರಿ ಮಠದ ಸದ್ಗುರು ಮಾಧವಾನಂದ ಪ್ರಭೂಜಿ, ಗುರು ಪುತ್ರೇಶ್ವರ ಮಹಾರಾಜರು ಹಾಗೂ ಜಗನ್ನಾಥ ಮಹಾರಾಜರ ಪುಣ್ಯಸ್ಮರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಸಪ್ತಾಹ ಮಂಗಲೋತ್ಸವದಲ್ಲಿ ಮಾತನಾಡಿದರು.
ಸಂಗಪ್ಪ ಮಹಾರಾಜರು, ಸತ್ಯಪ್ಪ ಮಹಾರಾಜರು, ಕೆಂಚಪ್ಪ ಮಹಾರಾಜರು, ರಾಮಣ್ಣ ಮಹಾರಾಜರು ಹಾಗೂ ಗಿರಿಮಲ್ಲಪ್ಪ ಬಂಟ್ರೋಳಿ ಪ್ರವಚನ ನೀಡಿದರು. ಶಂಕರೆಪ್ಪ ಮಹಾರಾಜರು ದಾಸ ಬೋಧ ವಿಮಲ ಬ್ರಹ್ಮ ನಿರೂಪಣೆಯೊಂದಿಗೆ ಮಾಧವಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಸಪ್ತಾಹ ಸಮಾರೋಪಗೊಂಡಿತು.
ಮಾರುತಿ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಗಿರೀಶ ಭಜಂತ್ರಿ, ಸದಾಶಿವ ನಾವಿ, ಕರೆಪ್ಪ ಭಜಂತ್ರಿ, ವಸಂತ ಭಜಂತ್ರಿ, ಅಶೋಕ ಭಜಂತ್ರಿ, ನಾರಾಯಣ ಪತ್ತಾರ, ಪ್ರಕಾಶ ಕಮತ, ರವಿ ನೇಗಿನಾಳ ಇತರರಿದ್ದರು.