ಸಾರ್ವಜನಿಕರ ಅನುಕೂಲಕ್ಕಾಗಿ ಕಾಮಗಾರಿಗೆ ವೇಗ

ಕೋ.ಶಿವಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ತವನಪ್ಪ ಟೋಪಣ್ಣವರ, ಸಿಂಗಯ್ಯ ಮಠಪತಿ, ಬಸವರಾಜ ಅಯ್ಯನಗೌಡರ  ಇತರರಿದ್ದರು.
ಕೋ.ಶಿವಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ತವನಪ್ಪ ಟೋಪಣ್ಣವರ, ಸಿಂಗಯ್ಯ ಮಠಪತಿ, ಬಸವರಾಜ ಅಯ್ಯನಗೌಡರ ಇತರರಿದ್ದರು.
Published on
ಕೋ.ಶಿವಾಪುರ: ಗ್ರಾಮೀಣ ಪ್ರದೇಶಗಳ ಜನರು ನಗರ ಪ್ರದೇಶಗಳಷ್ಟೇ ಉತ್ತಮ ಮೂಲ ಸೌಲಭ್ಯ ಪಡೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಅಭಿವದ್ಧಿ ಕಾಮಗಾರಿಗಳನ್ನು ವೇಗವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಶಿವಾಪುರ ಗ್ರಾಮದಲ್ಲಿ 2025-26ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿ 50ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ತವನಪ್ಪ ಟೋಪಣ್ಣವರ, ಸಿಂಗಯ್ಯ ಮಠಪತಿ, ಪಂಚಾಯತ ರಾಜ್ ಇಂಜನಿಯರಿಂಗ್ ಇಲಾಖೆ ಎಇಇ ಬಸವರಾಜ ಅಯ್ಯನಗೌಡರ, ಪಿಡಿಒ ಸಂಕಪ್ಪ ಪಡಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಸತೀಶ ಜಾರಕಿಹೊಳಿ ಆಪ್ತ ಸಹಾಯಕರಾದ ಅರವಿಂದ ಕಾರ್ಚಿ, ಪ್ರಕಾಶ ವಾಲಿ, ಪ್ರಕಾಶ ಸುಣಧೋಳಿ, ಸಿದ್ಧಲಿಂಗಯ್ಯ ಕುಂದರಗಿ, ಈಶ್ವರ ಕೌಜಲಗಿ, ಶಿವನಪ್ಪ ದಾಸಯ್ಯನವರ, ಸುರೇಶ ಪೊಲೀಸ್, ಗೂಡುಸಾಬ್ ಮುಗಟಖಾನ್, ಮಹಾದೇವ ಕುಂದರಗಿ, ಶಿವನಗೌಡರ ಗೌಡರ, ಬಂಗಾರೆಪ್ಪ ಹರಳಿ, ವಿಠ್ಠಲ ಬಂಟನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net