ಮಕ್ಕಳನ್ನು ಸಾಮಾನ್ಯವಾಗಿ ಸ್ಮಶಾನಕ್ಕೆ ಕರೆದುಕೊಂಡು ಬರುವುದಿಲ್ಲ. ಆದರೆ, ಇಲ್ಲಿನ ಸ್ಮಶಾನದಲ್ಲಿನ ಉದ್ಯಾನಕ್ಕೆ ವಾಯುವಿಹಾರಕ್ಕೆ ಹಾಗೂ ವಿಶೇಷ ದಿನಗಳಂದು ಶಿವನ ದರ್ಶನಕ್ಕೆ ಮಕ್ಕಳು, ಮಹಿಳೆಯರು ಕುಟುಂಬ ಸಹಿತ ಆಗಮಿಸುತ್ತಾರೆ. ಈ ಸಲದ ಶಿವರಾತ್ರಿಯಂದು ಜಾಗರಣೆಯಲ್ಲಿ ಮಹಿಳಾ ಮಂಡಳಿಗಳಿಂದ ವಿಶೇಷ ಭಜನಾ ಕಾರ್ಯಕ್ರಮವಿರಲಿದೆ. ಅಭಿಷೇಕ, ಮಹಾಪೂಜೆ, ಆರತಿ ಹಾಗೂ ಸಾಬುದಾನಿ ಖಿಚಡಿ ಮತ್ತು ಹಣ್ಣಿನ ಸಲಾಡ್ ಪ್ರಸಾದ ವಿತರಿಸಲಿದ್ದಾರೆ.