ಸೋಮನಾಥ ಪರ್ವ ಯಶಸ್ವಿಗೆ ಸರ್ವರು ಪ್ರಾರ್ಥಿಸೋಣ

ಸೋಮನಾಥ ಪರ್ವ ಪ್ರಯುಕ್ತ ಬೆಳಗಾವಿಯ ಕೆಎಲ್‌ಇ ಆವರಣದಲ್ಲಿನ ಶಿವಾಲಯದಲ್ಲಿ ಶನಿವಾರ ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದರು. ಮಹಾಂತೇಶ ಕವಟಗಿಮಠ, ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂ, ಸುಭಾಷ ಸಣ್ಣವೀರಪ್ಪನವರ ಇತರರಿದ್ದಾರೆ.
ಸೋಮನಾಥ ಪರ್ವ ಪ್ರಯುಕ್ತ ಬೆಳಗಾವಿಯ ಕೆಎಲ್‌ಇ ಆವರಣದಲ್ಲಿನ ಶಿವಾಲಯದಲ್ಲಿ ಶನಿವಾರ ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದರು. ಮಹಾಂತೇಶ ಕವಟಗಿಮಠ, ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂ, ಸುಭಾಷ ಸಣ್ಣವೀರಪ್ಪನವರ ಇತರರಿದ್ದಾರೆ.
Published on
ಬೆಳಗಾವಿ: ಒಂದು ಸಾವಿರ ವರ್ಷದಿಂದ ಸೋಮನಾಥ ಮಂದಿರದ ಬಗ್ಗೆ ಜನತೆ ವಹಿಸಿದ ಸಹನಶೀಲತೆ, ನಿರಂತರತೆ, ಪುನರುತ್ಥಾನದ ಯಶೋಗಾಥೆಯನ್ನು ನೆಪಿಸಿಕೊಳ್ಳುವ ಜತೆಗೆ, ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಈ ವರ್ಷ ‘ಸೋಮನಾಥ ಪರ್ವ’ ಆಯೋಜಿಸಲಾಗಿದೆ ಎಂದು ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಸೋಮನಾಥ ಮಂದಿರದ ಮೇಲಾದ ದಾಳಿಯ ಸಾವಿರ ವರ್ಷಗಳ ಸ್ಮರಣೆಯ ಪ್ರಯುಕ್ತ ಸೋಮನಾಥ ಮಂದಿರದಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಗರದ ಕೆ.ಎಲ್.ಇ ಸಂಸ್ಥೆಯ ಆವರಣದಲ್ಲಿನ ಶಿವಾಲಯದಲ್ಲಿ ಶನಿವಾರ ಬಿಜೆಪಿ ಮುಖಂಡರಿಂದ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಜನವರಿ 2026ಕ್ಕೆ ಘಜನಿ ಮಹಮದ್ ಗುಜರಾತಿನ ಸೋಮನಾಥ ಮಂದಿರದ ಮೇಲೆ ದಾಳಿ ನಡೆಸಿ ಸಾವಿರ ವರ್ಷ ಆಗುತ್ತಿದೆ. 1026 ಜನವರಿಯಲ್ಲಿ ಘಜನಿ ಮಹಮದ್ ದಾಳಿ ಮಾಡಿದ್ದನು. ಕಳೆದ ಒಂದು ಸಾವಿರ ವರ್ಷದಲ್ಲಿ ಸೋಮನಾಥ ಮಂದಿರದ ವಿಷಯದಲ್ಲಿ ಆಗಿರುವ ವಿದ್ಯಮಾನಗಳ ಧ್ಯೋತಕವಾಗಿ ಆಯೋಜಿಸಿರುವ ಸೋಮನಾಥ ಪರ್ವ ಯಶಸ್ವಿಗೆ ಸರ್ವರೂ ಪ್ರಾರ್ಥಿಸಬೇಕಿದೆ ಎಂದರು.
ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಅವರು ಮಾತನಾಡಿ, 2026ಕ್ಕೆ ಮಂದಿರ ಮರುನಿರ್ಮಾಣವಾಗಿ 75 ವರ್ಷ ಪೂರ್ಣಗೊಳ್ಳಲಿದೆ. 1, ಮೇ 1951ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಮಂದಿರವನ್ನು ಭಕ್ತರಿಗೆ ಮತ್ತೆ ತೆರೆಯಲಾಯಿತು. 1026ರ ಈ ಹೃದಯವಿದ್ರಾವಕ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮತ್ತು ಸೋಮನಾಥದ ಅಖಂಡತೆಗೆ ನಮಿಸುತ್ತಾ, ಎಲ್ಲ ಶಿವಾಲಯಗಳಲ್ಲಿ ‘ಓಂಕಾರ ಮಂತ್ರ ಜಪಿಸಲು ನಿರ್ಧರಿಸಲಾಗಿದೆ. ಎಲ್ಲಾ ದೇಶವಾಸಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು, ತಮ್ಮ ಹತ್ತಿರದ ಶಿವಾಲಯಗಳಲ್ಲಿ ಮಂತ್ರ ಪಠಣದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂರ, ಸುಭಾಷ ಸಣ್ಣವೀರಪ್ಪನವರ, ಪ್ರವೀಣ ಮಾಳೆದವರ, ಮಂಜುನಾಥ ಅಷ್ಟಗಿ ಇತರರಿದ್ದರು.
----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net