ಕೌಶಲ ವೃದ್ಧಿಯಿಂದ ವೃತ್ತಿಗೆ ಅನುಕೂಲ

ನಗರದ ಕೆಎಲ್​ಎಸ್​ ಐಎಂಇಆರ್​ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ಪಾಧ್ಯಾಪಕ ಅನಿಲ ಗುಪ್ತಾ ಮಾತನಾಡಿದರು. ಪ್ರದಿಪ್​ ಸಾವ್ಕರ್​, ಪ್ರೊ.ಸಿ.ಎಂ.ತ್ಯಾಗರಾಜ, ಯು.ಎನ್​.ಕಾಲ್ಕುಂದ್ರಿಕರ್​, ಡಾ.ಆರ್​ಿ ಶೇಖ್​, ಪಾರ್ವತಿ ಮುರಗೋಡ ಇತರರಿದ್ದರು.

Published on
ಬೆಳಗಾವಿ: ವೃತ್ತಿಪರ ಪದವಿ ಪಡೆದ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನಕ್ಕೆ ತಕ್ಕಂತೆ ಕೌಶಲ ವೃದ್ಧಿಸಿಕೊಂಡರೆ ವೃತ್ತಿ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಐಐಎಂ ಅಹಮದಾಬಾದ್​ನ ನಿವತ್ತ ಪ್ರಾಧ್ಯಾಪಕ ಅನಿಲ್​ ಗುಪ್ತಾ ಸಲಹೆ ನೀಡಿದರು.
ನಗರದ ಕೆಎಲ್​ಎಸ್​ ಐಎಂಇಆರ್​ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪದವಿ ಪಡೆದರೆ ಸಾಲದು, ಜಾಗತಿಕ ಮಟ್ಟದಲ್ಲಿ ಅವಶ್ಯಕವಿರುವ ಕೌಶಲ ವೃದ್ಧಿಸಿಕೊಳ್ಳಬೇಕು, ವೃತ್ತಿ ಜೀವನವನ್ನು ಉಜ್ವಲವಾಗಿಸಿಕೊಂಡರೆ ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿ ಲಭಿಸುತ್ತದೆ ಎಂದರು.
ಇದೇ ವೇಳೆ 116 ವಿದ್ಯಾರ್ಥಿಗಳಿಗೆ ಎಂಬಿಎ ಉತ್ತೀರ್ಣ ಪ್ರಮಾಣಪತ್ರ ವಿತರಿಸಲಾಯಿತು. ಕೆಎಲ್​ಎಸ್​ ಅಧ್ಯ ಪ್ರದಿಪ್​ ಸಾವ್ಕರ್​ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ,ಕೆಎಲ್​ಎಸ್​ ಐಎಂಇಆರ್​ ಆಡಳಿತ ಮಂಡಳಿ ಅಧ್ಯ ಯು.ಎನ್​.ಕಾಲ್ಕುಂದ್ರಿಕರ್​, ನಿರ್ದೇಶಕ ಡಾ.ಆರ್​ಿ ಶೇಖ್​, ಪಾರ್ವತಿ ಮುರಗೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net