ಬೆಳಗಾವಿ:ಸೋಯಾ, ಅವರೆ ಬೆಳೆಯ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ದತೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬೀಜ ವಿತರಣೆಯನ್ನು ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಚಾಲನೆಯಿದ್ದು, ರೈತರ ಅನುಕೂಲಕ್ಕಾಗಿ 6 ಹೆಚ್ಚವರಿ ಬೀಜ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸೋಯಾಬಿನ ಬಿತ್ತನೆಗೆ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಮತ್ತು ತಂಪಾದ ವಾತಾವರಣದ ಅವಶ್ಯಕವಿದ್ದ ಕಾರಣ ಸಾಕಷ್ಟು ಮಳೆಯಾದ ನಂತರವಷ್ಟೇ ಬಿತ್ತನೆ ಮಾಡಲು ಸೂಚಿಸಲಾಗಿದೆ. ಬಿತ್ತನೆಗೆ ಭೂಮಿ ಹದ ಮಾಡಿದ ನಂತರ 30 ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 8-10 ಸೆಂ.ಮೀ., ಇರುವಂತೆ ಬಿತ್ತನೆ ಮಾಡಬೇಕು.
ಬಿತ್ತನೆ ಮಾಡುವ ಪೂರ್ವದಲ್ಲಿ ಪ್ರತಿ ಕೆ.ಜಿ ಬೀಜಕ್ಕೆ 2 ಗ್ರಾಂ. ಥೈರಾಮ್ (75 ಡಬ್ಲೂ.ಪಿ) ಅಥವಾ 2 ಗ್ರಾಂ. ಕಾರ್ಬಾಕ್ಸಿನ್ (75 ಡಬ್ಲೂ.ಪಿ) ರಾಸಾಯನಿಕಗಳ ಮೂಲಕ ಬೀಜೋಪಚರಿಸುವುದರಿಂದ ರೋಗಗಳನ್ನು ತಡೆಗಟ್ಟಬಹುದಾಗಿದೆ ಪ್ರತಿ ಕೆ.ಜಿ ಬೀಜಕ್ಕೆ 2 ಗ್ರಾಂ. ಥೈರಾಮ್ (75 ಡಬ್ಲೂ.ಪಿ) ಅಥವಾ 2 ಗ್ರಾಂ. ಕಾರ್ಬಾಕ್ಸಿನ್ (75 ಡಬ್ಲೂ.ಪಿ) ರಾಸಾಯನಿಕಗಳಿಂದ ಬೀಜೋಪಚರಿಸಿ. ಇದರಿಂದ ರೋಗಗಳನ್ನು ತಡೆಗಟ್ಟಬಹುದಾಗಿದೆ. ಪ್ರತಿ ಕೆ.ಜಿ ಬೀಜಕ್ಕೆ 15 ಗ್ರಾಂ. ರೈಜೋಬಿಯಂ ಜೈವಿಕ ಗೊಬ್ಬರ ಮತ್ತು 15 ಗ್ರಾಂ. ರಂಜಕ ಕರಗಿಸುವ ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡಿ ಬಿತ್ತನೆ ಕೈಗೊಳ್ಳಬೇಕು.ಜೂನ್ ನಿಂದ ಜುಲೈ 15ನೇ ತಾರಿಖಿನ ವರೆಗೆ ಹದವರಿತ ತೇವಾಂಶ ಮತ್ತು ತಂಪಾದ ವಾತಾವರಣ ಇದ್ದಾಗ ಮಾತ್ರ ಬಿತ್ತನೆ ಮಾಡುವುದು ಸೂಕ್ತ.
ಹೆಚ್ಚಿನ ಮಾಹಿತಿಗಾಗಿ ರೈತ ಭಾಂದವರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ್ ತಿಳಿಸಿದ್ದಾರೆ.