ಕಾರು ಡಿಕ್ಕಿಯಾಗಿ ತಂಗಿ ಸಾವು, ಅಕ್ಕ ಗಂಭೀರ

ಅಪಘಾತ
ಅಪಘಾತ
Published on
ಮೇಖಳಿ: ಗ್ರಾಮದ ಹೊರವಲಯದಲ್ಲಿರುವ ಆಂಗ್ಲ ಮಾಧ್ಯಮ ಶಾಲೆ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಜಯಶ್ರೀ ಕೊಟ್ರೆ (10) ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಭಾಗ್ಯಶ್ರೀ ಕೊಟ್ರೆ (13) ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಸಹೋದರಿಯರಿಗೆ ಕಾರು ಡಿಕ್ಕಿಯಾಗಿದೆ
ಎಂದು ಸ್ಥಳಕ್ಕೆ ಭೇಟಿ ನೀಡಿದ ರಾಯಬಾಗ ಪೊಲೀಸ್ ಠಾಣೆ ಪಿಐ ಎಂ.ಎಂ.ಡಪ್ಪಿನ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net