ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ

 ಬೆಳಗಾವಿ ನಗರದ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಛೇರಿಯಲ್ಲಿ  ಈಚೆಗೆ ಹಮ್ಮಿಕೊಂಡಿದ್ದ ಸಿಂಧೂರ ಲಕ್ಷ್ಮಣ ಜಯಂತಿ ಕಾರ್ಯಕ್ರಮ ಜರುಗಿತು.  ಡಾ. ಗೀತಾಂಜಲಿ ಕುರುಡಗಿ, ಡಾ. ನೀಲಪ್ಪ ವಾಲಿಕಾರ,  ಶಿ.ಗು. ಕುಸಗಲ್ಲ ಇತರರಿದ್ದರು.
ಬೆಳಗಾವಿ ನಗರದ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಛೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಿಂಧೂರ ಲಕ್ಷ್ಮಣ ಜಯಂತಿ ಕಾರ್ಯಕ್ರಮ ಜರುಗಿತು. ಡಾ. ಗೀತಾಂಜಲಿ ಕುರುಡಗಿ, ಡಾ. ನೀಲಪ್ಪ ವಾಲಿಕಾರ, ಶಿ.ಗು. ಕುಸಗಲ್ಲ ಇತರರಿದ್ದರು.
Published on
ಬೆಳಗಾವಿ: ಇತಿಹಾಸವೆಂದರೆ ಕೇವಲ ಕೋಟೆ ಕೊತ್ತಲಗಳಲ್ಲಿ ಅಷ್ಟೇ ಇಲ್ಲ, ಗುಡಿಸಲುಗಳಲ್ಲಿ ಬಡತನದ ಬೇಗೆಯಲ್ಲಿ ಬೆಂದ ಕ್ರಾಂತಿಯ ಜ್ವಾಲೆಗಳಾಗಿ ಪ್ರಜ್ವಲಿಸಿದ ಸ್ವಾತಂತ್ರ್ಯ ಹೋರಾಟದ ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ ಎಂದು ಡಾ. ಗೀತಾಂಜಲಿ ಕುರುಡಗಿ ಅಭಿಪ್ರಾಯ ಪಟ್ಟರು.
ನಗರದ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಛೇರಿಯಲ್ಲಿ ಈಚೆಗೆ ಯುವ ಬರಹಗಾರರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಸ್ವಾತಂತ್ರ್ಯ ಸೇನಾನಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಿಂಧೂರ ಲಕ್ಷ್ಮಣನ ಇಡೀ ಜೀವನ ಚರಿತ್ರೆಯನ್ನು ಕೇವಲ ಬ್ರಿಟಿಷ ಆಡಳಿತದ ಕಡತಗಳ ದೃಷ್ಟಿಯಲ್ಲಿ ನೋಡುವುದಕ್ಕಿಂತ ಲಾವಣಿ, ಸೋಬಾನೆ ಪದ, ಬಿಸುಕಲ್ಲಿನ ಹಾಡುಗಳಂತಹ ವೀರಗಾತೆಗಳನ್ನು ಗಮನಿಸಿದರೆ ಸಿಂಧೂರ ಲಕ್ಷ್ಮಣನ ನಿಜ ಚರಿತ್ರೆಯನ್ನು ಅರ್ಥೈಸಿಕೊಳ್ಳಬಹುದು ಎಂದರು.
ಡಾ. ನೀಲಪ್ಪ ವಾಲಿಕಾರ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಸಿಂಧೂರ ಲಕ್ಷ್ಮಣನ ಅಧ್ಯಯನ ಪೀಠಗಳನ್ನು ಆರಂಭಿಸಿ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಸತ್ಯ ಸಂಗತಿಗಳ ಚರಿತ್ರೆಯನ್ನು ಕಟ್ಟಿಕೊಡಬೇಕು. ಆ ಮೂಲಕ ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರೇಮವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿರುವ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಯುವ ಬರಹಗಾರರ ವೇದಿಕೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ಸಾಹಿತಿ ಶಿ.ಗು. ಕುಸಗಲ್ಲ ಮಾತನಾಡಿ, ನಾವು ಬರೆಯದಿದ್ದರೂ ಇನ್ನೊಬ್ಬರ ಬರವಣಿಗೆಯ ಸ್ಪೂರ್ತಿ ಆಗಬೇಕು ಅಂತಹ ವ್ಯಕ್ತಿತ್ವ ಸಿಂಧೂರ ಲಕ್ಷ್ಮಣನ ಹತ್ತಿರವಿತ್ತು. ನಾಡಿನ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದು, ಯುವ ಸಮುದಾಯಕ್ಕೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡಬೇಕಾಗಿದೆ. ಹೊಸದಾಗಿ ಬರವಣಿಗೆಯಲ್ಲಿ ತೊಡಗಿಕೊಂಡ ಲೇಖಕರಿಗೆ ವೇದನೆಯ ಜತೆಗೆ ಸಂವೇದನೆಗಳನ್ನು ದಾಖಲಿಸುವ ಶಕ್ತಿ ಇರಬೇಕು ಎಂದು ಹೇಳಿದರು.
ಪ್ರೊ. ದೇಮಣ್ಣ ಸೊಗಲದ, ಡಾ ಬಾಲಕೃಷ್ಣ ನಾಯಕ, ಡಾ. ಮಂಜುನಾಥ ಪಾಟೀಲ, ಬಾಳೇಶ ದಾಸನಟ್ಟಿ ,ಅಶೋಕ ಚಂದರಗಿ, ಡಾ. ಕೆ.ಎನ್. ದೊಡ್ಡಮನಿ, ಮಲ್ಲಿಕಾರ್ಜುನ ಲೋಕಳೆ, ಡಾ. ಮಹೇಶ ಗಾಜಪ್ಪನವರ, ಮಹೇಶ ಡಾಲೆ, ಡಾ. ಸತೀಶ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net