ಬೆಳಗಾವಿ ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಈಚೆಗೆ ಸಿಂಧೂರ ಲಕ್ಷ್ಮಣ ಜಯಂತಿ ಕಾರ್ಯಕ್ರಮ ಜರುಗಿತು. ಡಾ.ಗೀತಾಂಜಲಿ ಕುರುಡಗಿ, ಡಾ.ನೀಲಪ್ಪ ವಾಲಿಕಾರ, ಶಿ.ಗು.ಕುಸಗಲ್ಲ ಇತರರಿದ್ದರು.
Published on:
Copied
Follow Us
ಬೆಳಗಾವಿ: ಬಡತನದ ಬೇಗೆಯಲ್ಲಿ ಬೆಂದು ಕ್ರಾಂತಿಯ ಜ್ವಾಲೆಗಳಾಗಿ ಪ್ರಜ್ವಲಿಸಿದ ಸ್ವಾತಂತ್ರ$್ಯ ಹೋರಾಟದ ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ ಎಂದು ಡಾ. ಗೀತಾಂಜಲಿ ಕುರುಡಗಿ ಹೇಳಿದರು.
ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಯುವ ಬರಹಗಾರರ ವೇದಿಕೆ ಜಿಲ್ಲಾ ಟಕದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸ್ವಾತಂತ್ರ$್ಯ ಸೇನಾನಿ ವೀರ ಸಿಂಧೂರ ಲಕ್ಷ$್ಮಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಡಾ. ನೀಲಪ್ಪ ವಾಲಿಕಾರ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಸಿಂಧೂರ ಲಕ್ಷ$್ಮಣನ ಅಧ್ಯಯನ ಪೀಠಗಳನ್ನು ಆರಂಭಿಸಿ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಸತ್ಯ ಸಂಗತಿಗಳ ಚರಿತ್ರೆ ಕಟ್ಟಿಕೊಡಬೇಕು ಎಂದರು.
ಸಾಹಿತಿ ಶಿ.ಗು.ಕುಸಗಲ್ಲ ಮಾತನಾಡಿ, ನಾವು ಬರೆಯದಿದ್ದರೂ ಇನ್ನೊಬ್ಬರ ಬರವಣಿಗೆಯ ಸ್ಫೂರ್ತಿ ಆಗಬೇಕು. ಹೊಸದಾಗಿ ಬರವಣಿಗೆಯಲ್ಲಿ ತೊಡಗಿರುವ ಲೇಖಕರಿಗೆ ವೇದನೆ ಜತೆಗೆ ಸಂವೇದನೆ ದಾಖಲಿಸುವ ಶಕ್ತಿ ಇರಬೇಕು ಎಂದರು.
ಪೊ.ದೇಮಣ್ಣ ಸೊಗಲದ, ಡಾ ಬಾಲಕೃಷ್ಣ ನಾಯಕ, ಡಾ. ಮಂಜುನಾಥ ಪಾಟೀಲ, ಬಾಳೇಶ ದಾಸನಟ್ಟಿ, ಅಶೋಕ ಚಂದರಗಿ, ಡಾ.ಕೆ.ಎನ್.ದೊಡ್ಡಮನಿ, ಮಲ್ಲಿಕಾರ್ಜುನ ಲೋಕಳೆ, ಡಾ. ಮಹೇಶ ಗಾಜಪ್ಪನವರ, ಮಹೇಶ ಡಾಲೆ, ಡಾ.ಸತೀಶ ನಾಯಕ ಇತರರಿದ್ದರು.