ಶ್ರದ್ಧಾ ಸೊಸೈಟಿಗೆ 1.51 ಕೋಟಿ ರೂ. ಲಾಭ

ನಿಪ್ಪಾಣಿಯ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಕ್ಕೋಳ ಶಾಖೆ ಸ್ಥಳಾಂತರ ಸಮಾರಂಭದಲ್ಲಿ ಚಂದ್ರಕಾಂತ ಕೋಠಿವಾಲೆ, ಅನಿಕೇತ ಕುಲಕರ್ಣಿ, ಶಿವಮೂರ್ತಿ ಸ್ವಾಮಿ, ಸುರೇಶ ಕೋಠಿವಾಲೆ ಇತರರಿದ್ದರು.
ನಿಪ್ಪಾಣಿಯ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಕ್ಕೋಳ ಶಾಖೆ ಸ್ಥಳಾಂತರ ಸಮಾರಂಭದಲ್ಲಿ ಚಂದ್ರಕಾಂತ ಕೋಠಿವಾಲೆ, ಅನಿಕೇತ ಕುಲಕರ್ಣಿ, ಶಿವಮೂರ್ತಿ ಸ್ವಾಮಿ, ಸುರೇಶ ಕೋಠಿವಾಲೆ ಇತರರಿದ್ದರು.
Published on
ನಿಪ್ಪಾಣಿ: ಗ್ರಾಹಕರ ಬೆಂಬಲ, ಪಾರದರ್ಶಕ ಹಾಗೂ ಉನ್ನತಮಟ್ಟದ ಸೇವೆ ಪರಿಣಾಮದಿಂದ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 2025-26ನೇ ಆರ್ಥಿಕ ವರ್ಷದಲ್ಲಿ 1.51 ಕೋಟಿ ರೂ. ಲಾಭ ಗಳಿಸಿದ್ದು, 150 ಕೋಟಿ ರೂ. ಠೇವು ಸಂಗ್ರಹಣೆಯ ಸನಿಹದಲ್ಲಿದ್ದೇವೆ ಎಂದು ಸಂಸ್ಥಾಪಕ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.
ತಾಲೂಕಿನ ಅಕ್ಕೋಳ ಗ್ರಾಮದಲ್ಲಿದ್ದ ಸಂಘದ ಶಾಖೆಯನ್ನು ಹೊಸ ಜಾಗಕ್ಕೆ ಸ್ಥಳಾಂತರ ಸಮಾರಂಭದಲ್ಲಿ ಈಚೆಗೆ ಮಾತನಾಡಿದರು. ಸಂಘದ ಅಕ್ಕೋಳ ಶಾಖೆ 12 ವರ್ಷಗಳಿಂದ ಗ್ರಾಹಕರಿಗೆ ಉನ್ನತ ಮಟ್ಟದ ಸೇವೆ ಸಲ್ಲಿಸುತ್ತ ಬಂದಿದ್ದು, 10 ಕೋಟಿ ರೂ. ಠೇವು ಸಂಗ್ರಹಿಸಿದೆ ಎಂದರು.
ಶಾಖೆಯ ಸಂಚಾಲಕ ಶಿವಾನಂದ ಮಲಾಬಾದೆ ದಂಪತಿ ಪೂಜೆ ನೆರವೇರಿಸಿದರು. ಅನಿಕೇತ ಕುಲಕರ್ಣಿಸರಕಾರ ಉದ್ಘಾಟಿಸಿದರು. ಸಂಘದ ವೈಸ್-ಚೇರ್ಮನ್ ಶಿವಮೂರ್ತಿ ಸ್ವಾಮಿ, ಸಂಚಾಲಕ ಸುರೇಶ ಕೋಠಿವಾಲೆ, ಸಿಇಒ ದಿನಕರ ಪವಾರ, ಶಶಿಕಾಂತ ಕೋಠಿವಾಲೆ, ಪಪ್ಪು ಪಾಟೀಲ, ರಾವಸಾಹೇಬ ಪಾಟೀಲ, ರಾಜಶೇಖರ ಹಿರೇಕೊಡಿ, ನರಸಗೊಂಡ ಪಾಟೀಲ, ರಾಜೇಶ ತಿಳವೆ, ಮುರಘೇಂದ್ರ ತೋಡಕರ, ಅಕ್ಕೋಳ ಶಾಖೆ ಚೇರ್ಮನ್ ಜಗದೀಶ ಕುಲಕರ್ಣಿ, ವೈಸ್ ಚೇರ್ಮನ್ ಶ್ರೀರಾಮ ಭಾರಮಲ, ಬಾಳಾಸಾಹೇಬ ಕದಮ, ರವಿಂದ್ರ ಗೊರವಾಡೆ, ಸುಂದರ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net