ಭಕ್ತರ ಸಮ್ಮುಖದಲ್ಲಿ ಶಿವಯೋಗಿಗಳ ಅದ್ದೂರಿ ರಥೋತ್ಸವ

ಅಥಣಿ ಗಚ್ಚಿನಮಠದ ಜಾತ್ರೆ ಅಂಗವಾಗಿ ರಥೋತ್ಸವ ಜರುಗಿತು.
ಅಥಣಿ ಗಚ್ಚಿನಮಠದ ಜಾತ್ರೆ ಅಂಗವಾಗಿ ರಥೋತ್ಸವ ಜರುಗಿತು.
Published on
ಅಥಣಿ: ಇಲ್ಲಿನ ಗಚ್ಚಿನಮಠದ 105ನೇ ಜಾತ್ರೆ ಅಂಗವಾಗಿ ಶುಕ್ರವಾರ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಅಥಣಿ ಮುರುಘೇಂದ್ರ ಶಿವಯೋಗಿಗಳು ಬಸವತತ್ತ್ವ ಮೈಗೂಡಿಸಿಕೊಂಡು ಕಾವಿ ಕುಲಕ್ಕೆ ಘನತೆ ತಂದಿದ್ದಾರೆ. ಇಲ್ಲಿಯ ಜನರು ಕಾಯಕಜೀವಿಗಳಾಗಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶಿವಯೋಗಿಗಳ ಜಾತ್ರಾ ಮಹೋತ್ಸವ ಹಬ್ಬದಂತೆ ಕಳೆಗಟ್ಟಿದೆ. ಭಕ್ತರ ಸಹಕಾರ, ಪ್ರೀತಿ, ವಿಶ್ವಾಸದಿಂದ ಎಲ್ಲ ಕಾರ್ಯ ಯಶಸ್ವಿಯಾಗಿವೆ ಎಂದರು.
ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ನದಿ ಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವೀರೇಶ್ವರ ದೇವರು, ಬಾಬುರಾವ ಮಹಾರಾಜರು, ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ, ಶಿವಾನಂದ ದಿವಾನಮಳ, ಕೆ.ಎ.ವನಜೋಳ, ಪ್ರಕಾಶ ಮಹಾಜನ, ಮಹಾದೇವ ಹೊನ್ನಳಿ, ರಮೇಶ ಸಿಂದಗಿ ಇತರರು ಇದ್ದರು.
ರಥೋತ್ಸವ ಸಾಗುವ ರಸ್ತೆಯನ್ನು ರಂಗೋಲಿ, ವಿದ್ಯುತ್ ದೀಪಗಳ ಅಲಂಕಾರ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟ ಮರುಘೇಂದ್ರ ಸ್ವಾಮೀಜಿ ಭಾವಚಿತ್ರವನ್ನು ರಥೋತ್ಸವದಲ್ಲಿಟ್ಟು ಹೂವಿನಿಂದ ಅಲಂಕರಿಸಲಾಯಿತು. ಸಕಲ ವಾದ್ಯಮೇಳ, ಶಿವಭಜನೆ, ವಚನಗೀತೆಗಳ ಗಾಯನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗವಿಮಠಕ್ಕೆ ಸಾಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net