ಶಿವಲಿಂಗೇಶ್ವರಮಠದ ಜಾತ್ರೆ ಇಂದಿನಿಂದ

ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರಮಠ.
ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರಮಠ.
Published on
ಹಿನ್ನೆಲೆ: 25 ವರ್ಷಗಳ ಹಿಂದೆ ಅಥಣಿ ಪಟ್ಟಣದಿಂದ ಕುಮಾರ ಶ್ರೀಗಳು ಹೂಲಿಕಟ್ಟಿ ಹೊರವಲಯದ ರುದ್ರಭೂಮಿ ಹಾಗೂ ಕಲ್ಮೇಶ್ವರ ದೇವಸ್ಥಾನ ಬಳಿ ಇರುವ ಮರದ ಕೆಳಗಡೆ ಶ್ರೀಗಳು ತಪಸ್ಸಿಗೆ ಕುಳಿತ ಸುದ್ದಿ ಸುತ್ತಲಿನ ಗ್ರಾಮಗಳಿಗೆ ಹರಡಿತು. ಬಳಿಕ ಅನೇಕ ಭಕ್ತರು ಶ್ರೀಗಳನ್ನು ಕಂಡು ಇದೇ ಗ್ರಾಮದಲ್ಲಿ ನೆಲೆಸಲು ವಿನಂತಿಸಿದರು. ಭಕ್ತರ ಕೋರಿಕೆಯಂತೆ ಗುಡ್ಡ ಪ್ರದೇಶದಲ್ಲಿ ಬೆಳೆದ ಹುತ್ತದ ಸ್ಥಳ ಗುರುತಿಸಿ ಇಲ್ಲೇ ನೆಲೆಸುವೆ ಎಂದರು.
ನಂತರ ಭಕ್ತರು ಒಗ್ಗೂಡಿ ಮಂದಿರ ನಿರ್ಮಾಣಕ್ಕೆ ಮುಂದಾದರು. ಆಗ ಶಾಸಕ ರಮೇಶ ಜಾರಕಿಹೊಳಿ ಹಾಗೂ ಭಕ್ತರ ಕೊಡುಗೆಯಿಂದ ಶಿವಲಿಂಗೇಶ್ವರಮಠ ನಿರ್ಮಾಣಗೊಂಡಿದೆ. ಸದ್ಯ ಶ್ರೀಮಠದಲ್ಲಿ ಶ್ರೀಗಳು ಧಾರ್ಮಿಕ, ಆಧ್ಯಾತ್ಮಿಕ, ಪ್ರವಚನ, ದಾಸೋಹ, ಲೋಕಕಲ್ಯಾಣಕ್ಕಾಗಿ ಏಳು ತಿಂಗಳು ಮೌನಾನುಷ್ಠಾನ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ.
ವಿವಿಧ ಕಾರ್ಯಕ್ರಮ: ಜ.10ರಂದು ಬೆಳಗ್ಗೆ 10 ಗಂಟೆಗೆ ಕುಮಾರ ಸ್ವಾಮೀಜಿ ಘಟಸ್ಥಲ ಧ್ವಜಾರೋಹಣ ಮೂಲಕ ಜಾತ್ರೆಗೆ ಚಾಲನೆ ನೀಡುವರು. ನಿತ್ಯ ಸಂಜೆ 6 ಗಂಟೆಗೆ ಪ್ರವಚನ, ಕೀರ್ತನೆ ನೆರವೇರಲಿದೆ. ಜ.12ರಂದು ಸಂಜೆ 5 ಗಂಟೆಗೆ ಜಾನುವಾರು ಜಾತ್ರೆ, ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ, ಸಂಜೆ 7ಕ್ಕೆ ಜಾನಪದ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಜ.13ರಂದು ಬೆಳಗ್ಗೆ 7 ಗಂಟೆಗೆ ಶ್ರೀದೇವಿ ಪಾರಾಯಣ, ಧರ್ಮಸಭೆ ಹಾಗೂ ಸಹಸ್ರ ದೀಪೋತ್ಸವ,
 ಜ.14ರಂದು ಬೆಳಗ್ಗೆ 6 ಗಂಟೆಗೆ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾ ಮಂಗಳಾರತಿ, 10 ಗಂಟೆಗೆ ಕುಂಭ ಕಲಶ ಮೆರವಣಿಗೆ, ಜಂಗಮಹೋತ್ಸವ, ಶಿವಲಿಂಗೇಶ್ವರ ಕಂಚಿನ ಮೂರ್ತಿ ಮೆರವಣಿಗೆ ಹಾಗೂ ಗ್ರಾಮದ ಸಕಲ ದೇವರ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12ಕ್ಕೆ  ಶಾಸಕ ರಮೇಶ ಜಾರಕಿಹೊಳಿ ಅವರು ಶಿವಲಿಂಗೇಶ್ವರ ಟ್ರಸ್ಟ್ ಕಮಿಟಿ ಗೋಶಾಲೆ ಉದ್ಘಾಟಿಸುವರು. 1 ಗಂಟೆಗೆ ಧರ್ಮಸಭೆ ಹಾಗೂ ಪ್ರವಚನ ಮಂಗಲೋತ್ಸವ ನೆರವೇರಲಿದೆ. ಪ್ರತಿದಿನ ಅನ್ನದಾಸೋಹ ಆಯೋಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net