ಶಿವಚಿದಂಬರೇಶ್ವರ ಜಾತ್ರೆ ನ.21ರಿಂದ

ಶಿವಚಿದಂಬರೇಶ್ವರ
ಶಿವಚಿದಂಬರೇಶ್ವರ
Published on
ಮುರಗೋಡ: ಸ್ಥಳಿಯ ಶ್ರೀ ೇತ್ರ ಕೆಂಗೇರಿ ಶಿವಚಿದಂಬರೇಶ್ವರರ 266ನೇ ಅವತಾರ ಜಯಂತಿ ಶೈವಾಗಮೋಕ್ತ ಮಹೋತ್ಸವ ಅಂಗವಾಗಿ ನ.21 ರಿಂದ 27ರವರೆಗೆ ಶಿವ ಚಿದಂಬರೇಶ್ವರ ಜಾತ್ರೆ ಜರುಗಲಿದೆ. ನ.21ರಂದು ಶ್ರೀಮಲ್ಲಾರಿ ನವರಾತ್ರಿ ಉತ್ಸವದ ಆರಂಭ, ಶಿವಚಿದಂಬರೇಶ್ವರ, ಶೈವಾಗ ಮಹೋತ್ಸವ, ಪುಣ್ಯಾಹವಾಚನ, ನಾಂದಿ ಸ್ಥಾಪನೆ, ಮಧುಪರ್ಕ, ಋತ್ವಿಕವರ್ಣಿ, ಹುತ್ತಪೂಜೆ ನೆರವೇರಲಿದೆ. ನ.22ರಂದು ಧ್ವಜಾರೋಹಣ, ಯಮಂಟಪ ಪ್ರವೇಶ, ದೇವತಾ ಸ್ಥಾಪನೆ, ಹೋಮ, ಚತುರ್ವೇದ ಪಾರಾಯಣ, ಬಲಿಹರಣ ಹಾಗೂ ಬಲಿ ಪಲ್ಲಕ್ಕಿ ಸೇವೆ, ಶೇಷವಾಹನೋತ್ಸವ, ಪುಷ್ಪವಾಹನೋತ್ಸವ ನ.23ರಂದು ಬಲಿಹರಣ ಪಲ್ಲಕ್ಕಿ ಸೇವೆ ಗರುಡವಾನೋತ್ಸವ, ಮಯೂರ ವಾಹನೋತ್ಸವ, ನ.24ರಂದು ಹಂಸವಾಹನೋತ್ಸವ, ವೃಷಭವಾಹನೋತ್ಸವ, 25ರಂದು ಅಶ್ವವಾಹನೋತ್ಸವ, ಗಜವಾಹನೋತ್ಸವ, ನ.26ರಂದು ಶಿವಚಿದಂರೇಶ್ವರ ಅವತಾರ ಜಯಂತಿ ಭೈವಾಗಮೋಕ್ತ ಮಹೋತ್ಸವ ಅಂಗವಾಗಿ ಶಿವಚಿದಂಬರೇಶ್ವರ ಕಲ್ಯಾಣೋತ್ಸವದಲ್ಲಿ ವಿವಿಧ ರಾಜ್ಯ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಲಿದೆ. ಅಷ್ಟಾವಧಾನ ಸೇವೆ, ವನಯಾತ್ರೆ, ಶಯನೋತ್ಸವ ಬಲಿಹರಣ, ಪಲ್ಲಕ್ಕಿ ಉತ್ಸವ ನಂತರ ಮಹಾ ಪ್ರಸಾದ ಜರುಗಲಿದೆ ಎಂದು ೇತ್ರದ ಪೀಠಾಧಿಕಾರಿ ದಿವಾಕರ ದೀತ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net