ಶಂಕರಲಿಂಗ ಜಾತ್ರೆ ಸಂಪನ್ನ

ಶಂಕರಲಿಂಗ ರಥೋತ್ಸವ
ಶಂಕರಲಿಂಗ ರಥೋತ್ಸವ
Published on
ಸಂಕೇಶ್ವರ: ಐತಿಹಾಸಿಕ ಶಂಕರಲಿಂಗ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವ ಭವ್ಯ ರಥೋತ್ಸವದೊಂದಿಗೆ ಶಂಕರಲಿಂಗನ ಮಹಾಯಾತ್ರೆ ನೆರವೇರಿತು. ಬುಧವಾರ ಬೆಳಗ್ಗೆ ಶ್ರೀ ಶಂಕರಲಿಂಗನಿಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ, ಮಂತ್ರ ಪುಷ್ಪ ಅರ್ಪಣೆ ಸೇರಿ ವಿವಿಧ ಪೂಜಾ ಕೈಕಂರ್ಯ ನೆರವೇರಿದವು.
ಸಂಜೆ ಬನಶಂಕರಿ ದೇವಸ್ಥಾನದಿಂದ ಸಕಲ ವಾದ್ಯಮೇಳಗಳೊಂದಿಗೆ ಸಾಗಿದ ರಥೋತ್ಸವ ಮೆರವಣಿಗೆ ಮರಳಿ ಶ್ರೀ ಮಠಕ್ಕೆ ಆಗಮಿಸಿ ಮೂಲಸ್ಥಾನದಲ್ಲಿ ನೆಲೆಗೊಂಡಿತು. ರಥದಲ್ಲಿ ಆಸೀನರಾಗಿದ್ದ ಶ್ರೀಮಠದ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ ಭಕ್ತರಿಗೆ ಆಶೀರ್ವಾದ ನೀಡಿದರು.
ಮಹಾರಾಷ್ಟ್ರ, ಗೋವಾ ಸೇರಿ ನಾಡಿನ ವಿವಿಧೆಡೆಯ ಭಕ್ತಾದಿಗಳು ಜಾತ್ರೆ ಕಣ್ತುಂಬಿಕೊಂಡರು. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಪೂಜಾ-ವಿಧಿವಿಧಾನ, ಕ್ರೀಡಾ ಸ್ಪರ್ಧೆಗಳು ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net