ಸಮೀಪದ ಹಿರೇಮುನವಳ್ಳಿ ಗ್ರಾಮದ ಸಿದ್ಧ ಶಿವಯೋಗಿ ಶಾಂಡಿಲ್ಯೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರೆ ಅಂಗವಾಗಿ ಮಠದಲ್ಲಿ ಧರ್ಮಚಿಂತನಾ ಸಭೆ, ಸಾಧಕರ ಸತ್ಕಾರ, ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಆಧ್ಯಾತ್ಮಿಕ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಮುಖಂಡರಾದ ರುದ್ರಗೌಡ ಪಾಟೀಲ, ಬಸವೇಶಿ ನಿಂಬಾಳ್ಕರ, ಶಿವಪ್ಪ ಅಳವಣಿ, ಬಾಹುಬಲಿ ಪಾಟೀಲ ಹಾಗೂ ಭಕ್ತರು ಇದ್ದರು.