

ಆಗಷ್ಟ್ ಮುಗಿಯಲು ಕೊನೆ ಮುಗಿಯಲು ಒಂದೇ ದಿನ ಬಾಕಿ ಇದ್ದರೂ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಉದ್ಭವಿಸಿರುವ ಸರ್ವರ್ ಸಮಸ್ಯೆ ಕೊನೆಗೊಂಡಿಲ್ಲ. ಪರಿಣಾಮ, ಭಾನುವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜನ ಕೆವೈಸಿ ಮಾಡಿಸಲು ಹಾಗೂ ಬಯೋಮೆಟ್ರಿಕ್ ಮಾಡಿ ಪಡಿತರ ಪಡೆಯಲು ಮುಗಿಬಿದ್ದಿದ್ದರು. ಸರ್ವರ್ ಸಮಸ್ಯೆ ಕಾರಣಕ್ಕೆ ರಾತ್ರಿವರೆಗೂ ಸರತಿ ಸಾಲಿನಲ್ಲಿ ಕಾದು ನಿರಾಸೆಯಿಂದ ಮರಳಬೇಕಾಯಿತು. ಸೋಮವಾರ ಈ ತಿಂಗಳ ಪಡಿತರ ಪಡೆಯಲು ಕೊನೆಯ ದಿನವಾಗಿದ್ದು, ಲಾನುಭವಿಗಳು ಪಡಿತರದಿಂದ ವಂಚಿತರಾಗುವ ಆತಂಕ ಎದುರಾಗಿದೆ.