ಧರ್ಮಸ್ಥಳ ಸಂಘದಿಂದ ಸ್ವಾವಲಂಬಿ ಜೀವನ

ಐನಾಪುರದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಚಾಲನೆ ನೀಡಿದರು. ಅರುಣ ಗಾಣಿಗೇರ, ನಾಗರತ್ನ ಹೆಗಡೆ, ಕಸ್ತೂರಿ ಮಡಿವಾಳ,ಸುಧಾ ನಾಯಿಕ, ಸುಭಾಷ ಲೋಂಡೆ ಇತರರಿದ್ದರು.
ಐನಾಪುರದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಚಾಲನೆ ನೀಡಿದರು. ಅರುಣ ಗಾಣಿಗೇರ, ನಾಗರತ್ನ ಹೆಗಡೆ, ಕಸ್ತೂರಿ ಮಡಿವಾಳ,ಸುಧಾ ನಾಯಿಕ, ಸುಭಾಷ ಲೋಂಡೆ ಇತರರಿದ್ದರು.
Published on
ಐನಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ ಉದ್ಯೋಗಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವುಗಳ ಸದುಪಯೋಗ ಪಡೆದು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಸಂಘದ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಹೇಳಿದರು.
ಪಟ್ಟಣದ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಪಪಂ ಸದಸ್ಯ ಅರುಣ ಗಾಣಿಗೇರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಲ್ಲಿ ಉಳಿತಾಯ ಮನೋಭಾವ ಬೆಳೆಸಿದೆ ಎಂದರು. ಅಥಣಿ ಜೆಎ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಪ್ರಿಯವಂದಾ ಹುಲಗಬಾಳಿ ಉಪನ್ಯಾಸ ನೀಡಿದರು. ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿದರು. ಸಂಘದ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಮಡಿವಾಳ, ಸುಧಾ ನಾಯಿಕ, ಸುಭಾಷ ಲೋಂಡೆ, ಅರವಿಂದ ಕಾರ್ಚಿ, ಐನಾಪುರ ವಲಯ ಮೇಲ್ವಿಚಾರಕಿ ಸವಿತಾ ದೇಸಾಯಿ, ಶಿವು ಶಿಪ್ಪರಮಟ್ಟಿ ಇತರರಿದ್ದರು. ತಾಲೂಕು ಯೋಜನಾಧಿಕಾರಿ ಸಂಜೀವ ಮರಾಠಿ ನಿರೂಪಿಸಿದರು.
ಐನಾಪುರದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಚಾಲನೆ ನೀಡಿದರು. ಅರುಣ ಗಾಣಿಗೇರ, ನಾಗರತ್ನ ಹೆಗಡೆ, ಕಸ್ತೂರಿ ಮಡಿವಾಳ,ಸುಧಾ ನಾಯಿಕ, ಸುಭಾಷ ಲೋಂಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net