ಸಂಕಷ್ಟ ಮೆಟ್ಟಿ ನಿಲ್ಲಲು ಆತ್ಮಬಲ ಅಗತ್ಯ

ಸಪ್ತಸಾಗರ ಗ್ರಾಮದ ಶಿವಬಸವ ಗುರುಮಂದಿರದ ಪ್ರಥಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸದಾಶಿವ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಮಹಾಲಿಂಗಯ್ಯ ಹಿರೇಮಠ, ರುದ್ರಪ್ಪ ವಾಸ್ತು ಇತರರಿದ್ದರು.
ಸಪ್ತಸಾಗರ ಗ್ರಾಮದ ಶಿವಬಸವ ಗುರುಮಂದಿರದ ಪ್ರಥಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸದಾಶಿವ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಮಹಾಲಿಂಗಯ್ಯ ಹಿರೇಮಠ, ರುದ್ರಪ್ಪ ವಾಸ್ತು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸದಾಶಿವ ಶ್ರೀ ಅಭಿನುಡಿ
  • ಶಿವಬಸವ ಗುರುಮಂದಿರದ ವಾರ್ಷಿಕೋತ್ಸವ
ಅಥಣಿ ಗ್ರಾಮೀಣ: ನಾನು ಎನ್ನುವ ಅಹಂಭಾವ ಬಿಟ್ಟು ಎಲ್ಲರೂ ನನ್ನವರು ಎಂಬ ಭಾವನೆಯಿಂದ ನಡೆದರೆ ಸ್ವರ್ಗ ಸುಖ ದೊರೆಯುತ್ತದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಮಂಗಳವಾರ ಶಿವಬಸವ ಗುರುಮಂದಿರದ ಪ್ರಥಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವೇಷ, ಅಸೂಯೆ, ಸ್ವಾರ್ಥ ಬಿಟ್ಟು ಸತ್ಯದ ಕಡೆಗೆ ಸಾಗಿದರೆ ಭಗವಂತನಿಗೆ ಇಷ್ಟವಾಗುತ್ತಿರಿ. ಧರ್ಮ ಹಾಗೂ ಧಾರ್ಮಿಕ ಕಾರ್ಯಗಳು ಮನುಷ್ಯನನ್ನು ಉತ್ತಮ ಜೀವನ ನಡೆಸಲು ಪ್ರೇರೇಪಿಸುತ್ತವೆ. ಮಕ್ಕಳ ಜೀವನ ರೂಪಿಸಲು ಸಾಹಿತ್ಯ ಮತ್ತು ಸಂಸ್ಕೃತಿ ಉತ್ತಮ ಗ್ರಂಥಗಳ ಓದಿನ ಅಭಿರುಚಿ ಬೆಳೆಸಬೇಕಿದೆ.
ಹಲ್ಯಾಳ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಅಹಂಕಾರವೆಂಬ ದೂಳು ಕುಳಿತರೆ ಅದನ್ನು ಒರೆಸಲು ಯಾರಿಂದಲೂ ಸಾಧ್ಯವಿಲ್ಲ. ಸಂಕಷ್ಟಗಳನ್ನು ಮೆಟ್ಟಿ ನಿಲ್ಲಲು ಆತ್ಮಬಲ ಬೆಳೆಸಿಕೊಳ್ಳಬೇಕು. ಬಸವಣ್ಣನವರನ್ನು ಸ್ಮರಿಸುವ, ಪೂಜಿಸುವ ಕೆಲಸ ಮಾತ್ರ ನಡೆಯದೇ ಬಸವ ತತ್ತ್ವಆಚರಣೆಯಲ್ಲಿ ಇರಬೇಕು ಎಂದರು.
ಮಹಾಲಿಂಗಯ್ಯ ಹಿರೇಮಠ, ತಜ್ಞ ರುದ್ರಪ್ಪ ವಾಸ್ತು, ಸಂಜಯ ನಾಡಗೌಡ, ಆರ್.ಎ.ಪಾಟೀಲ, ಬಾಬುಲಾಲ್ ನದಾಫ್, ಅಶೋಕ ಐಗಳಿ, ರವೀಂದ್ರ ಬೊಮ್ಮನ್ನವರ, ಮಹಾವೀರ ಬಿಳಿಕುರಿ, ಡಿ.ಬಿ.ನದಾಫ್, ಮಲ್ಲಪ್ಪ ದರೂರ, ಸದಾಶಿವ ಹಣಗಂಡಿ, ರಾಮು ಘಸ್ತಿ, ಪಿಡಿಒ ಅಚ್ಯುತ ಕುಲಕರ್ಣಿ, ಗ್ರಾಮಾಡಳಿತಾಽಕಾರಿ ಅಶೋಕ ಕೋಗಿಲೆ, ಯಲ್ಲಪ್ಪ ಕಾಂಬಳೆ, ಚಿದಾನಂದ ಮಾಂಗ, ಅಪ್ಪಾಸಾಬ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net