ಗುರಿ ಸಾಧನೆಗೆ ಆತ್ಮವಿಶ್ವಾಸ ಅತ್ಯಗತ್ಯ

ಬೆಳಗಾವಿ ಗುರುದೇವ ಜಂಬಗಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ  ಗುರುದೇವ ಬಳುಂಡಗಿ ಮಾತನಾಡಿದರು.
ಬೆಳಗಾವಿ ಗುರುದೇವ ಜಂಬಗಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಗುರುದೇವ ಬಳುಂಡಗಿ ಮಾತನಾಡಿದರು.
Published on

ಬೆಳಗಾವಿ:

ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆ ಗುರುತಿಸಿಕೊಂಡು ಸ್ಪಷ್ಟವಾದ ಗುರಿ ಹೊಂದಬೇಕು. ಗುರಿ ಸಾಧನೆಗೆ ಕಠಿಣ ಪರಿಶ್ರಮದ ಜತೆಗೆ ಸಮಯದ ಸದುಪಯೋಗ, ಶಿಸ್ತು, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸ ಅತ್ಯಗತ್ಯ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಗುರುದೇವ ಬಳುಂಡಗಿ ಹೇಳಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಗುರಿ ಸಾಧನೆಯ ಮನೋಭಾವ ಹಾಗೂ ಭವಿಷ್ಯದ ವೃತ್ತಿ ಆಯ್ಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಗುರುದೇವ ಜಂಬಗಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳು, ಉನ್ನತ ಶಿಕ್ಷಣ ಹಾಗೂ ವಿವಿಧ ವೃತ್ತಿ ಕ್ಷೇತ್ರಗಳಲ್ಲಿನ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಲಾಯಿತು. ವಿಫಲತೆಯನ್ನು ಅಂತ್ಯವೆಂದು ಪರಿಗಣಿಸದೆ, ಯಶಸ್ಸಿನತ್ತ ಕೊಂಡೊಯ್ಯುವ ಅನುಭವವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಜಂಬಗಿ ಕಾಲೇಜಿನ ನಿರ್ದೇಶಕರಾದ ಡಾ.ಲಕ್ಷ್ಮಣ ಜಂಬಗಿ,ಡಾ. ವರ್ಷಾ ಜಂಬಗಿ, ಗುರುದೇವ ಕಾಲೇಜಿನ ನಿರ್ದೇಶಕ ಅಖಿಲಕುಮಾರ ಹಲಗತ್ತಿ, ವಿಭಾಗೀಯ ಮುಖ್ಯಸ್ಥ ಮಹಾಲಿಂಗ ಕಮತಗಿ, ಕಾಲೇಜಿನ ಪ್ರಾಚಾರ್ಯ ಪ್ರವೀಣ ಚಾಂದಿಲ್ಕರ, ಆಡಳಿತಾಧಿಕಾರಿ ಬಸವರಾಜ ತುಬಾಕಿ, ಮಹೇಶ ಕಲ್ಲೋಳ್ಳಿ, ರಾಜು ಹೈಬತ್ತಿ ಇತರರಿದ್ದರು. ಆಮಿರಾ ಸೇಠ್ ನಿರೂಪಿಸಿದರು, ಮಂಜುನಾಥ ಕಾದ್ರೊಳ್ಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net