ವಿವಿಧ ಸಂಘಕ್ಕೆ ನಾಮನಿರ್ದೇಶಕರ ಆಯ್ಕೆ

ಬೋರಗಾಂವ ಪಟ್ಟಣದಲ್ಲಿ ಕೃಷಿ ಸಂಘಕ್ಕೆ ಹೊಸದಾಗಿ ನಾಮನಿರ್ದೇಶನಗೊಂಡ ನಿರ್ದೇಶಕರಿಗೆ ಆಯ್ಕೆ ಪತ್ರ ವಿತರಿಸಲಾಯಿತು. ಶರದ ಜಂಗಟೆ, ಎಸ್.ಬಿ.ಪಾಟೀಲ, ಅಜಿತ ತೇರದಾಳೆ, ಅಜಿತ ಕಾಂಬಳೆ ಇತರರಿದ್ದರು.
ಬೋರಗಾಂವ ಪಟ್ಟಣದಲ್ಲಿ ಕೃಷಿ ಸಂಘಕ್ಕೆ ಹೊಸದಾಗಿ ನಾಮನಿರ್ದೇಶನಗೊಂಡ ನಿರ್ದೇಶಕರಿಗೆ ಆಯ್ಕೆ ಪತ್ರ ವಿತರಿಸಲಾಯಿತು. ಶರದ ಜಂಗಟೆ, ಎಸ್.ಬಿ.ಪಾಟೀಲ, ಅಜಿತ ತೇರದಾಳೆ, ಅಜಿತ ಕಾಂಬಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶುಗರ್ಸ್ ನಿರ್ದೇಶಕ ಶರದ ಜಂಗಟೆ ಮಾಹಿತಿ
  • ಅವಕಾಶ ಸದುಪಯೋಗವಾಗಲಿ
ಬೋರಗಾಂವ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಪ್ರಯತ್ನದಿಂದ ಪಟ್ಟಣದ ವಿವಿಧ ಕೃಷಿ ಸಂಘಗಳಿಗೆ ನಾಮನಿರ್ದೇಶಿತ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ಹಾಲಶುಗರ್ಸ್ ನಿರ್ದೇಶಕ ಶರದ ಜಂಗಟಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ನಾಮನಿರ್ದೇಶಿತ ನಿರ್ದೇಶಕರಾಗಿ ಜಿತೇಂದ್ರ ಪಾಟೀಲ ಮತ್ತು ರಾಜಕುಮಾರ ಉರನಕರ, ಜೈ ಗೋಮಟೇಶ ಕೃಷಿ ಸಂಘಕ್ಕೆ ಮಹಾದೇವ ಖೋತ ಮತ್ತು ಇಲಾಯಿ ಕಾಪಸೆ, ಬೋರಗಾಂವ ಪೂರ್ವ ಭಾಗ ಸಂಘಕ್ಕೆ ಭಾವುಸಾಬ ಮಹಾಜನ ಹಾಗೂ ಭರಮಾ ಕೂಡಚೆ,
ಪದ್ಮಾವತಿ ಗ್ರಾಮೀಣ ಕೃಷಿ ಸಂಘಕ್ಕೆ ಸ್ವಾತಿ ಕುಡಚೆ ಮತ್ತು ಮಾಯಕ್ಕ ಖೋತ. ಅಲ್ಲದೆ, ಜೈ ಗೋಮಟೇಶ ಕೃಷಿ ಸಂಘದ ಸಂಚಾಲಕರಾಗಿ ಭರತ ಜಂಗಟೆ ಹಾಗೂ ಆಚಾರ್ಯ ಶ್ರೀ ೧೦೮ ಶಾಂತಿಸಾಗರ ಕ್ರೆಡಿಟ್ ಸೊಸೈಟಿ ಸಂಚಾಲಕರಾಗಿ ಡಾ.ಮಹಾವೀರ ಬಂಕಾಪುರೆ ಆಯ್ಕೆಯಾಗಿದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೆ.ಮಹಾಜನ ಮಾತನಾಡಿ, ನಿರ್ದೇಶಕ ಸ್ಥಾನದ ಅವಕಾಶ ಸದುಪಯೋಗ ಪಡಿಸಿಕೊಂಡು ಕಾರ್ಯ ಮಾಡೋಣ ಎಂದರು.
ಹಾಲ ಶುಗರ್ಸ್ ನಿರ್ದೇಶಕ ಶರದ ಜಂಗಟೆ, ಬಿ.ಕೆ.ಮಹಾಜನ, ಜಿತೇಂದ್ರ ಪಾಟೀಲ, ಬಬನ ರೆಂದಾಳೆ, ಅಜಿತ ತೇರದಾಳೆ, ಬಾಹುಬಲಿ ಪಾಟೀಲ, ಎಸ್.ಬಿ.ಪಾಟೀಲ, ಬಾಳಾಸಾಹೇಬ ಉರನಕರ, ಶಂಕರ ಗುರವ, ಉತ್ತಮ ಕದಂ, ಅಜಿತ ಕಾಂಬಳೆ, ಭರತ ಕಾಂಬಳೆ, ಮಲ್ಲು ಖೋತ, ರಾಜು ಕುಂಬಾರ, ಶಂಕರ ಗುರವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net