ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಗೆ ಆಯ್ಕೆ

 ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷರಾಗಿ ಜಯಕುಮಾರ ಖೋತ ಮತ್ತು ಉಪಕಾರ್ಯಾಧ್ಯಕ್ಷೆಯಾಗಿ ಗೀತಾ ಪಾಟೀಲ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಮಲಗೊಂಡಾ ಪಾಟೀಲ, ಪವನ ಪಾಟೀಲ, ಅಪ್ಪಾಸಾಹೇಬ ಶಿರಗಾವೆ, ಸಮಿತ ಸಾಸನೆ, ಪವನ ಪಾಟೀಲ ಇತರರಿದ್ದರು.

Published on
ನಿಪ್ಪಾಣಿ:
ಕಾರ್ಖಾನೆಯಲ್ಲಿ ಬುಧವಾರ ಅಧಿಕಾರ ಹಸ್ತಾಂತರಿಸಿದ ಬಳಿಕ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಅಧಿಕಾರಿ, ಎಸಿ ಸುಭಾಸ ಸಂಪಗಾಂವಿ ಸಮ್ಮುಖದಲ್ಲಿ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಾಯಕತ್ವದಲ್ಲಿ ಕಾರ್ಖಾನೆ ಸರ್ವತೋಮುಖ ಪ್ರಗತಿ ಹೊಂದಲಿದೆ ಎಂದರು.
ಕಾರ್ಯಾಧ್ಯಕ್ಷ ಜಯಕುಮಾರ ಖೋತ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಕಾರ್ಯಾಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಮಾರ್ಗದರ್ಶನದಲ್ಲಿ ಕಾರ್ಖಾನೆ ಮತ್ತು ರೈತರ ಹಿತದೃಷ್ಟಿಯಿಂದ ಎಲ್ಲ ಸಂಚಾಲಕರನ್ನು ವಿಶ್ವಾಸದಲ್ಲಿ ತೆಗೆದುಕೊಂಡು ಕಾರ್ಖಾನೆಯ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಸಾಲಮುಕ್ತವಾಗಿ ನಡೆಸುವುದೇ ನಮ್ಮ ಗುರಿ ಎಂದರು.
ಉಪಾಧ್ಯಕ್ಷೆ ಗೀತಾ ಪಾಟೀಲ, ಸಂಚಾಲಕ ಸಮಿತ ಸಾಸನೆ, ಪವನ ಪಾಟೀಲ, ರಾಮಗೌಡ ಪಾಟೀಲ, ಜಯವಂತ ಭಾಟಲೆ, ರಾಜು ಗುಂದೆಶಾ, ವಿನಾಯಕ ಪಾಟೀಲ, ಆನಂದ ಯಾದವ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಕಚೇರಿ ಅಧೀಕ್ಷಕ ಗಜಾನನ ರಾಮನಕಟ್ಟಿ, ಸುನೀಲ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net