ಕ್ಷೇತ್ರಾಭಿವೃದ್ಧಿಯೇ ಮೊದಲ ಗುರಿ

ಐನಾಪುರ-ಹುಲಬಾಳಿ ರಸ್ತೆ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ರಾಜು ಕಾಗೆ, ಪ್ರೇಮಲತಾ ರೆಡ್ಡಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ ಇತರರಿದ್ದರು.
ಐನಾಪುರ-ಹುಲಬಾಳಿ ರಸ್ತೆ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ರಾಜು ಕಾಗೆ, ಪ್ರೇಮಲತಾ ರೆಡ್ಡಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ ಇತರರಿದ್ದರು.
Published on
ಐನಾಪುರ: ಮುಂಬರುವ ಚುನಾವಣೆಯಲ್ಲಿ ಕಾಗವಾಡದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾನೇ ಎಂಬುದು ಶತಸಿದ್ಧ ಈ ಕುರಿತು ಯಾವುದೇ ಊಹಾಪೋಹ ಬೇಡ ಎಂದು ಶಾಸಕ ರಾಜು ಕಾಗೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯೇ ಮೊದಲ ಗುರಿ ಎಂದರು. ಶಿರಗುಪ್ಪಿ, ಉಗಾರ್ ಬುದ್ರುಕ, ಐನಾಪುರ ಹಾಗೂ ಮೊಳೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಜಿಪಂ ಮಾಜಿ ಸದಸ್ಯೆ ಪ್ರೇಮಲತಾ ರೆಡ್ಡಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜೀವ ಭಿರಡಿ, ಗುಂಡು ಖವಟಕೊಪ್ಪ, ಸತೀಶ ಅಪರಾಜ, ವಿಜಯ ಅಕಿವಾಟೆ, ವಿಪುಲ ಪಾಟೀಲ, ಅಣ್ಣಾಸಾಬ ಖೋತ, ಡಾ.ಅಮೂಲ ಸರಡೆ, ಅರವಿಂದ ಕಾರ್ಚಿ, ಪ್ರಕಾಶ ಕೋರ್ಬು, ವಿನೋದ ಕೋಳೆಕರ, ಸಿದ್ದಪ್ಪ ಕನಾಳೆ, ಧರ್ಮಾ ಕೋಳೆಕರ, ವಿಶ್ವನಾಥ ನಾಮದಾರ,
ಮಲ್ಲಿಕಾರ್ಜುನ ಮಗದುಮ್ಮ, ಮಲ್ಲಿಕಾರ್ಜುನ ಇಸರಗೊಂಡ, ರವಿ ಮಾಳಿ, ಬಸಪ್ರಸಾದ ಪಾಟೀಲ, ಅಕ್ಷಯ ಮಾಳಿ, ಶಿವರುದ್ರ ಗೂಳಪ್ಪನವರ, ಅರ್ಜುನ ನಾಯಿಕ, ಶಿವಪುತ್ರ ನಾಯಿಕ, ಶಿವು ಸಂಕ್ರಟ್ಟಿ, ಶೇರ್‌ಅಲಿ ಬಾರಗೀರ್, ಸಮೀವುಲ್ಲಾ ಬಾರಗೀರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net