ಈಗಾಗಲೇ ಪಾಲಿಕೆಯ ಒಡೆತನದ ಆಸ್ತಿ ಸೇರಿ ಸಾಮಾಜಿಕ ಸೇವಾ ಉದ್ದೇಶಕ್ಕೆ ಮೀಸಲಿಟ್ಟಿರುವ ಜಾಗಗಳನ್ನು ಖಾಸಗಿ ಸಂಸ್ಥೆಗಳಿಗೆ ಬೋಗ್ಯ, ಬಾಡಿಗೆ ಆಧಾರದ ಮೇಲೆ ಅಂದಾಜು 110 ಕ್ಕೂ ಅಧಿಕ ಆಸ್ತಿ ನೀಡಲಾಗಿದೆ. ಈ ಆಸ್ತಿಗಳ ಪೈಕಿ 70ಕ್ಕೂ ಅಧಿಕ ಆಸ್ತಿಗಳ ಗುತ್ತಿಗೆ ಅವಧಿ ಮುಗಿದು ಎರದು ವರ್ಷ ಕಳೆದಿವೆ. ಆದರೆ, ಇಂತಹ ಆಸ್ತಿ ವಶಕ್ಕೆ ಪಡೆದುಕೊಳ್ಳಲು ಸೂಕ್ತ ದಾಖಲೆಗಳು ಸಿಗುತ್ತಿಲ್ಲ. ಕೆಲ ಆಸ್ತಿ ಖಾಸಗಿ ವ್ಯಕ್ತಿ, ಸಂಸ್ಥೆ ಹೆಸರಿಗೆ ದಾಖಲಾಗಿವೆ.ಇದರಿಂದಾಗಿ ಪಾಲಿಕೆಗೆ ಮಾಸಿಕ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದೆ.