ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ

ಸಮಾರಂಭದಲ್ಲಿ ಬಸವೇಶ್ವರ ಶ್ರೀ ಮಾತನಾಡಿದರು. ಬಸವೇಶ್ವರ ಸ್ವಾಮೀಜಿ, ಲತಾ ಮುಳ್ಳೂರು ಇತರರಿದ್ದರು.
ಸಮಾರಂಭದಲ್ಲಿ ಬಸವೇಶ್ವರ ಶ್ರೀ ಮಾತನಾಡಿದರು. ಬಸವೇಶ್ವರ ಸ್ವಾಮೀಜಿ, ಲತಾ ಮುಳ್ಳೂರು ಇತರರಿದ್ದರು.
Published on
ಕಾಗವಾಡ: ಸಾವಿತ್ರಿಬಾಯಿ ುಲೆ ಸಾಕಷ್ಟು ನೋವು, ಅವಮಾನ, ಹಿಂಸೆ ಅನುಭವಿಸಿ, ಮಹಿಳೆಯರಿಗೆ ಶಿಕ್ಷಣ ನೀಡುವುದೊಂದೇ ಪ್ರಮುಖ ಗುರಿಯನ್ನಾಗಿ ಇಟ್ಟುಕೊಂಡವರು ಎಂದು ಐನಾಪುರ-ಕೃಷ್ಣಾಕಿತ್ತೂರು ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಉಗಾರ ಖುರ್ದ ಪಟ್ಟಣದ ಶ್ರೀ ಮಹಾದೇವ ಮಂದಿರದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ುಲೆ ರಾಷ್ಟ್ರೀಯ ಶಿಕ್ಷಕಿಯರ ೆಡರೇಷನ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ ಸಮಾರಂಭದಲ್ಲಿ ಮಾತನಾಡಿ, ಈ ಸಂಘಟನೆಗೆ ಸಾವಿತ್ರಿಬಾಯಿ ುಲೆ ಶಿಕ್ಷಕರ ೆಡರೇಷನ್ ಎಂದು ಹೆಸರಿಟ್ಟಿರುವುದು ಶ್ಲಾಘನೀಯ ಎಂದರು.
ಲತಾ ಮುಳ್ಳೂರು ಮಾತನಾಡಿ, ಸೀ ಸಬಲೀಕರಣ, ಮಹಿಳಾ ನೌಕರರಿಗೆ ಬೆನ್ನೆಲುಬಾಗಿ ನಿಲ್ಲುವುದು ಸಾವಿತ್ರಿಬಾಯಿ ುಲೆ ರಾಷ್ಟ್ರೀಯ ಮಹಿಳಾ ನೌಕರರ ಸಂಘಟನೆ ಉದ್ದೇಶ ಎಂದರು.
ಸಾವಿತ್ರಿಬಾಯಿ ುಲೆ ಮಹಿಳಾ ನೌಕರರ ೆಡರೇಷನ್ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ಕಾಗವಾಡ ವಲಯದ ಸಿಆರ್‌ಸಿ ಮಟ್ಟದ 10 ಶಾಲೆಗಳಿಗೆ ಉತ್ತಮ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿ.ಕೆ.ಹಿರೇಮಠ, ಎನ್.ಕೆ.ಮಾಕಾಳಿ, ರಾಜು ಕೋಳಿ, ಕುಮಾರ ಗಾಣಿಗೇರ, ಅಶೋಕ ಮಗದುಮ್ಮ, ಮಹೇಶ ಹಳ್ಳೊಳ್ಳಿ, ಎಸ್.ಜಿ. ಸನಕರಿ, ಶೋಭಾ ಬಾಳಪ್ಪಗೋಳ, ಎಸ್.ಎಸ್. ಭಾವಿ, ಮಾರುತಿ ಸಂಕಪಾಳ, ಗಾಯತ್ರಿ ಮಾಳಗೆ, ಸುರೇಖಾ ಗಡನ್ನೇವರ, ದುಂಡವ್ವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net