ದೇವಿ ಜಾತ್ರೆಗೆ ಸವದತ್ತಿ ಸಜ್ಜು

ಸವದತ್ತಿ ಗ್ರಾಮದೇವಿ ಜಾತ್ರೆ ಶಾಂತಿಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಸದಾಶಿವ ಕೌಜಲಗಿ, ಚಿದಂಬರ ಮಡಿವಾಳರ ಡಾ.ಎನ್.ಸಿ. ಬೆಂಡಿಗೇರಿ ಇತರರಿದ್ದರು.
ಸವದತ್ತಿ ಗ್ರಾಮದೇವಿ ಜಾತ್ರೆ ಶಾಂತಿಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಸದಾಶಿವ ಕೌಜಲಗಿ, ಚಿದಂಬರ ಮಡಿವಾಳರ ಡಾ.ಎನ್.ಸಿ. ಬೆಂಡಿಗೇರಿ ಇತರರಿದ್ದರು.
Published on
ಜಾತ್ರೆಯ ಸಿದ್ಧತೆಗಳ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡಿವೈಎಸ್ಪಿ ಚಿದಂಬರ ಮಡಿವಾಳ ಮಾತನಾಡಿ, ಜಾತ್ರೆಗೆ ವಿಶೇಷ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ನಾಲ್ಕು ಸೆಕ್ಟರ್‌ಗಳಲ್ಲಿ ಭದ್ರತಾ ವ್ಯವಸ್ಥೆ ಯೋಜಿಸಲಾಗಿದೆ. ಮುಖ್ಯರಸ್ತೆ, ಊಟದ ಸ್ಥಳಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾ, ಪೆಟ್ರೋಲಿಂಗ್ ಬೈಕ್‌ಗಳ ಮೂಲಕ ಕಟ್ಟುನಿಟ್ಟಿನ ನಿಗಾ ಇಡಲಾಗುವುದು. ಎಪಿಎಂಸಿ, ಕರೀಕಟ್ಟಿ ಕ್ರಾಸ್ ಹಾಗೂ ಕಷಿ ಇಲಾಖೆ ಕಚೇರಿಯಲ್ಲಿ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗಿದ್ದು, ಭಾರಿ ವಾಹನಗಳಿಗೆ ಬೈಪಾಸ್ ರಸ್ತೆ ಮೂಲಕ ಮಾತ್ರ ಸಂಚರಿಸಲು ಅನುಮತಿ ನೀಡಲಾಗುವುದು ಎಂದು ವಿವರಿಸಿದರು.
ಬುಧವಾರದ ಸಂತೆ ಸ್ಥಳವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದ್ದು, ನೂಕನುಗ್ಗಲು ತಡೆಯಲು ಹಾಗೂ ಕಳವು ಮತ್ತಿತರ ಅಹಿತಕರ ಘಟನೆಗಳನ್ನು ತಪ್ಪಿಸಲು ಅಪರಾಧ ತಡೆ ತಂಡ ನಿಯೋಜಿಸಲಾಗುವುದು. ಮದ್ಯ ಮಾರಾಟ ನಿಷೇಧ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಮತ್ತು ವದ್ಧರಿಗಾಗಿ ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಮೇ 4ರಂದು ಸಂಗಪ್ಪನಕೊಳ್ಳ ದೇವಸ್ಥಾನದಲ್ಲಿ ದೇವಿಯರ ಮೂರ್ತಿಗಳ ಸಿದ್ಧತೆ ನಡೆಯಲಿದ್ದು, ಎಪಿಎಂಸಿಯಿಂದ ಕುಂಭ, ಆರತಿ ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಯಲಿದೆ.
ನಗರದ 65 ಓಣಿಗಳ ಮಹಿಳೆಯರು ಬೆಳಿಗ್ಗೆ 6 ಗಂಟೆಗೆ ಆಗಮಿಸಬೇಕು ಎಂದು ಕರೆ ನೀಡಿದರು. ಅಡಿವೆಪ್ಪ ಬೀಳಗಿ, ಮದನ ಚೋಪ್ರಾ, ಅಲ್ಲಮಪ್ರಭು ಪ್ರಭುನವರ, ಸದಾಶಿವ ಕೌಜಲಗಿ, ಡಾ.ಎನ್.ಸಿ.ಬೆಂಡಿಗೇರಿ, ಶಿವಾನಂದ ಹೂಗಾರ, ಭರಮಪ್ಪ ಅಣ್ಣಿಗೇರಿ, ಡಾ.ವೈ.ಎಂ.ಯಾಕೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net