ಮತ್ತಿಕೊಪ್ಪ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಕ್ರಾಂತಿ ಸಂಭ್ರಮ

ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಶೋಭಾ ತಿಪ್ಪರಡ್ಡಿ, ಶೋಭಾ ಗಾಣೂರ, ಸುಜಾತ ನಂದಿಮಠ, ಸಹನಾ ಬಗೋಜಿ, ಭಾಗ್ಯಶ್ರೀ ಗಾಣೂರ ಇತರರು ಪಾಲ್ಗೊಂಡಿದ್ದರು.
ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಶೋಭಾ ತಿಪ್ಪರಡ್ಡಿ, ಶೋಭಾ ಗಾಣೂರ, ಸುಜಾತ ನಂದಿಮಠ, ಸಹನಾ ಬಗೋಜಿ, ಭಾಗ್ಯಶ್ರೀ ಗಾಣೂರ ಇತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಮನ ಸೆಳೆದ ರಂಗೋಲಿ, ಜನಪದ ಗೀತೆ, ಕೋಲಾಟ ಪ್ರದರ್ಶನ
  • ವೈಜ್ಞಾನಿಕ ಚಿಂತನೆಗಳ ಸಂಗಮ
ಬೆಳಗಾವಿ: ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದಲ್ಲಿರುವ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ವೈಜ್ಞಾನಿಕ ಚಿಂತನೆಗಳ ಸಂಗಮವಾಗಿದ್ದ ಈ ಕಾರ್ಯಕ್ರಮಕ್ಕೆ ರೈತರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗವಹಿಸಿದ್ದರು. ಎಳ್ಳುಬೆಲ್ಲ ವಿನಿಮಯ, ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕೃಷಿ ವಿದ್ಯಾರ್ಥಿಗಳು ರಂಗೋಲಿ, ಜನಪದ ಗೀತೆ, ಕೋಲಾಟ ಪ್ರದರ್ಶಿಸಿ ಹಬ್ಬಕ್ಕೆ ಮೆರುಗು ನೀಡಿದರು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕೇಂದ್ರದ ಮುಖ್ಯಸ್ಥ, ವಿಜ್ಞಾನಿ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ಮಕರ ಸಂಕ್ರಾಂತಿ ಹಬ್ಬದ ಮಹತ್ವ ಹಾಗೂ ಕೃಷಿ ಬದುಕಿನೊಂದಿಗೆ ಅದರ ಅವಿನಾಭಾವ ಸಂಬಂಧವನ್ನು ವಿವರಿಸಿದರು. ನೂತನ ಬೆಳೆ ತಂತ್ರಜ್ಞಾನ, ಜೈವಿಕ ಕೃಷಿ, ಕಡಿಮೆ ವೆಚ್ಚದ ಉತ್ಪಾದನಾ ವಿಧಾನಗಳ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದರು.
ಕೇಂದ್ರದ ವಿಜ್ಞಾನಿಗಳು ಮಾತನಾಡಿ, ಸಂಕ್ರಾಂತಿ ಕೇವಲ ಹಬ್ಬವಲ್ಲ, ಅದು ಕೃಷಿ ವರ್ಷದ ಹೊಸ ಆರಂಭ. ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಆದಾಯ ದ್ವಿಗುಣಗೊಳ್ಳಲಿದೆ ಎಂದರು.
ಶೋಭಾ ತಿಪ್ಪರಡ್ಡಿ, ಶೋಭಾ ಗಾಣೂರ, ಸುಜಾತಾ ನಂದಿಮಠ, ಸಹನಾ ಬಗೋಜಿ, ಭಾಗ್ಯಶ್ರೀ ಗಾಣೂರ, ಜ್ಯೋತಿ ಪಚಾಪೂರ, ಸಿಂಚನಾ ಗುರುವಣ್ಣವರ, ಹೇಮಾ ಚೌರಡ್ಡಿ, ಜಯಶ್ರೀ ಮತ್ತಿಕೊಪ್ಪ, ಪ್ರಿಯಾ ಮುಚ್ಚಂಡಿ, ಸುಷ್ಮಾ ಪಾಟೀಲ, ಸೌಮ್ಯ ಯಡಹಳ್ಳಿ, ಪ್ರಿಯಾ ಮುನವಳ್ಳಿ, ಮೇಘಾ ನೂಲಿ, ಶಂಕರಗೌಡ ಪಾಟೀಲ, ಪ್ರವೀಣ ಯಡಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net