ನಂದೇಶ್ವರ: ಸಿಎಂ ಸಿದ್ದರಾಮಯ್ಯ ಎಲ್ಲ ಸಮುದಾಯಗಳಿಗೂ ಬಜೆಟ್‌ನಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಸಮೀಪದ ಸತ್ತಿ ಗ್ರಾಮಲ್ಲಿ ಶನಿವಾರ ಕೋಟಿ ರೂ. ವೆಚ್ಚದ ಗಂಗಾ-ಕಲ್ಯಾಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಕೊಕಟನೂರ ಗ್ರಾಮದಲ್ಲಿ ಬೃಹತ್ ಪ್ರಮಾಣದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭವಾಗಲಿದೆ. ಜಾನುವಾರುಗಳನ್ನು ದಾಖಲು ಮಾಡಿ ಗುಣಮುಖವಾದ ಬಳಿಕ ಮನೆಗೆ ಕರೆದುಕೊಂಡು ಹೋಗಬಹುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ತಾಪಂ ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಪ್ರಕಾಶ ಭೂಸಣ್ಣವರ, ಸಿದ್ದಯ್ಯ ಮಠಪತಿ, ಬಾಪು ಗಸ್ತಿ, ಹನುಮಂತ ಜಗದೇವ, ಸಂಜೀವ ಗಡ್ಯಾಗೋಳ, ಮಹಾದೇವಗೌಡ ಪಾಟೀಲ, ಈರಪ್ಪ ತಮದಡ್ಡಿ, ಶಿವಾನಂದ ನಂದೇಶ್ವರ, ಶ್ರೀನಿವಾಸ ಕುಲಕರ್ಣಿ, ಈಶ್ವರ ಮುಜಗೋಣಿ, ಮಲ್ಲಪ್ಪ ಶೇಗುಣಸಿ, ಪರಪ್ಪ ಚಮಕೇರಿ, ಶಂಕರ ಮಟ್ಟೆಪ್ಪನವರ, ಅಣ್ಣಪ್ಪ ಹುದ್ದಾರ, ಉಮರ್ ತಾಸಗಾಂವ, ಸುರೇಶ ಲಿಂಗರೆಡ್ದಿ, ರಾಮಪ್ಪ ಪರಟಿ, ಬಸಪ್ಪ ಚಂಡಕಿ, ಪ್ರದೀಪ ಪಾಟೀಲ, ಅಣ್ಣಪ್ಪ ಬಾಳಗೌಡರ ಇತರರಿದ್ದರು.