ಐನಾಪುರ: ಕಾಗವಾಡ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ದೊರೆತಿದ್ದು ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಪ್ರವೀಣ ಗಾಣಿಗೇರ ಹೇಳಿದರು.
ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ೨೦ ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಶಾಂತಿ ಸಾಗರ ಆಂಗ್ಲ ಮಾಧ್ಯಮ ವಿದ್ಯಾಪೀಠದ ಅಧ್ಯಕ್ಷ ಅರುಣ ಗಾಣಿಗೇರ ಮಾತನಾಡಿ, ಮುರಾರ್ಜಿ ವಸತಿ ಶಾಲೆ ಕಟ್ಟಡ, ಡಿಪ್ಲೊಮಾ ಕಾಲೇಜಿನ ಕಟ್ಟಡ ಹಾಗೂ ಐನಾಪುರದಿಂದ ಎಲ್ಲ ಸಂಪರ್ಕ ರಸ್ತೆಗಳ ಕಾಮಗಾರಿ ಆರಂಭವಾಗಿದ್ದು, ಸಾರ್ವಜನಿಕರಲ್ಲಿ ಸಂತಸ ತಂದಿದೆ ಎಂದರು.
ದಾದಾ ಜಂತನ್ನವರ, ಅರವಿಂದ ಕಾರಚಿ, ಕುಮಾರ ಜಯಕರ, ವಿಜಯ ಹರಳೆ, ಸುರೇಶ ಅಡಿ, ನವಲಪ್ಪ ಹಾಲರೊಟ್ಟಿ, ತಾಪಂ ಸಹಾಯಕ ಅಭಿಯಂತ ವೀರಣ್ಣ ವಾಲಿ, ಮಡಿವಾಳ ಪಾಟೀಲ, ಅನಿಲ ಸತ್ತಿ, ಪ್ರಕಾಶ ಗಾಣಿಗೇರ, ಇಸಾಕ್ ರಾವತ, ರಾಯಪ್ಪ ಹಾಲರೊಟ್ಟಿ ಇತರರಿದ್ದರು.