ಕಾಲೇಜಿಗೆ 1.25 ಕೋಟಿ ರೂ. ಅನುದಾನ

ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿಗೆ ಪ್ರಯೋಗಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುದಾನ ಮಂಜೂರಾತಿಗೆ ಕಾರಣರಾದ ಪ್ರಾಧ್ಯಾಪಕರಾದ ಡಾ.ವಿನೋದ ಬಿರಾದರ, ಡಾ.ಸಂಜಯ ಪೂಜಾರಿ ಅವರೊಂದಿಗೆ ಡಾ.ದರ್ಶನಕುಮಾರ ಬಿಳ್ಳೂರ ಇತರರಿದ್ದರು.
ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿಗೆ ಪ್ರಯೋಗಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುದಾನ ಮಂಜೂರಾತಿಗೆ ಕಾರಣರಾದ ಪ್ರಾಧ್ಯಾಪಕರಾದ ಡಾ.ವಿನೋದ ಬಿರಾದರ, ಡಾ.ಸಂಜಯ ಪೂಜಾರಿ ಅವರೊಂದಿಗೆ ಡಾ.ದರ್ಶನಕುಮಾರ ಬಿಳ್ಳೂರ ಇತರರಿದ್ದರು.
Published on
ಚಿಕ್ಕೋಡಿ: ಪಟ್ಟಣದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಯೋಗಾಲಯ ನಿರ್ಮಾಣಕ್ಕೆ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ-ಬಿಟಿ ವಿಭಾಗ ಲಿಪ್ ಯೋಜನೆಯಡಿ 1.25 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿನೋದ ಬಿರಾದರ ಹಾಗೂ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ.ಸಂಜಯ ಪೂಜಾರಿ ಇಂಟಲಿಜೆನ್ಸ ಸಿಸ್ಟಮ್ ಆ್ಯಂಡ್ ಕಾಗ್ನಿಟಿವ್ ಕಂಪ್ಯೂಟಿಂಗ್ ವಿಷಯದ ನಾವಿನ್ಯ ಪ್ರಯೋಗಾಲಯ ರಚನೆಗೆ ಸರ್ಕಾರಕ್ಕೆ ಬೆಂಗಳೂರೇತರ ಟೈರ್-2 ಹಾಗೂ ಟೈರ್-3 ನಗರಗಳಲ್ಲಿರುವವರ ಕಾಲೇಜುಗಳಿಗೆ ಕೌಶಲ ಹೆಚ್ಚಿಸಲು ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಿದ್ದರಿಂದ ಅನುದಾನ ದೊರೆತಿದೆ. ಮಂಜೂರಾದ ಅನುದಾನದಲ್ಲಿ ಪ್ರಯೋಗಾಲಯ ರಚನೆ, ಕೃಷಿ, ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರದವರಿಗೆ ಉಪಯೋಗವಾಗುವ ಸಂಶೋಧನೆ ಕೈಗೊಳ್ಳಲಾಗುವುದು ಎಂದು ಕಾಲೇಜು ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ.
ಅನುದಾನ ಮಂಜೂರಾತಿಗೆ ಕಾರಣರಾದ ಪ್ರಾಧ್ಯಾಪಕರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ ಕೋರೆ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net