116 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ

ಮೊಹಮ್ಮದ್​ ರೋಷನ್​
ಮೊಹಮ್ಮದ್​ ರೋಷನ್​
Published on
ಬೆಳಗಾವಿ: ಜಿಲ್ಲೆಯಲ್ಲಿ ಮಳೆಗೆ ಹಾನಿಗೀಡಾದ ಕೃಷಿ ಬೆಳೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಟ್ಟು 116 ಕೋಟಿ ರೂ. ನೆರೆ ಪರಿಹಾರ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 59,817 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. 43,767 ಹೆ. ಮಳೆಯಾಧಾರಿತ ಮತ್ತು 16,049 ಹೆ. ನೀರಾವರಿ ಜಮೀನಿತ್ತು. 87,916 ರೈತರ ಖಾತೆಗಳಿಗೆ 116 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪರಿಹಾರ 51.24 ಕೋಟಿ ರೂ. ಸಹ ಸೇರಿದೆ ಎಂದರು.
ಸವದತ್ತಿಗೆ 215 ಕೋಟಿ ರೂ.: ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿಗಾಗಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದ್ದ ಯೋಜನೆಗೆ 215 ಕೋಟಿ ರೂ. ಬಿಡುಗಡೆಯಾಗಿದ್ದು, ಫೆ.15ರಿಂದ 20ರ ಮಧ್ಯೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಅನುದಾನದಲ್ಲಿ ಕೇಂದ್ರ ಸರ್ಕಾರದ 118 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 97 ಕೋಟಿ ರೂ. ಪಾಲು ಇದೆ. ಜ.30ರೊಳಗ ಟೆಂಡರ್​ ಪ್ರಕ್ರಿಯೆಗೆ ಕೊನೆಯ ದಿನವಿದೆ. ಯೋಜನೆಯಲ್ಲಿ 8 ಸಾವಿರ ಜನರಿಗೆ ವಸತಿ ಸಂಕೀರ್ಣ, 4 ಸಾವಿರ ಜನಕ್ಕಾಗುವಷ್ಟು ಅನ್ನದಾಸೋಹ ಭವನ, ಪಾರ್ಕಿಂಗ್​ ಸ್ಥಳ ಅಭಿವೃದ್ಧಿ, ಜಾನುವಾರುಗಳಿಗಾಗಿ ಮೇವು ದಾಸೋಹ ಭವನ, 25 ಶೌಚಗೃಹ ಸಂಕೀರ್ಣ, ಆಡಳಿತ ಕಚೇರಿ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net