ಸ್ಥಳಿಯ ಸಂಸ್ಥೆಗಳ ಅಭಿವೃದ್ಧಿಗೆ 100 ಕೋಟಿ ರೂ.

ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ  ವಲಯದಲ್ಲಿ ಬುಧವಾರ ಹೊಸದಾಗಿ ನಿರ್ಮಿಸಲಾದ ಜಲಸಂಗ್ರಹಗಾರವನ್ನು ಸಚಿವ ಭೈರತಿ ಸುರೇಶ ಉದ್ಘಾಟಿಸಿದರು. ಆಸೀಫ್​ ಸೇಠ್​, ನಾರಾಯಣಸ್ವಾಮಿ, ಮಂಗೇಶ ಪವಾರ್​, ವಾಣಿ ಜೋಶಿ ಇತರರಿದ್ದರು.
ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ವಲಯದಲ್ಲಿ ಬುಧವಾರ ಹೊಸದಾಗಿ ನಿರ್ಮಿಸಲಾದ ಜಲಸಂಗ್ರಹಗಾರವನ್ನು ಸಚಿವ ಭೈರತಿ ಸುರೇಶ ಉದ್ಘಾಟಿಸಿದರು. ಆಸೀಫ್​ ಸೇಠ್​, ನಾರಾಯಣಸ್ವಾಮಿ, ಮಂಗೇಶ ಪವಾರ್​, ವಾಣಿ ಜೋಶಿ ಇತರರಿದ್ದರು.
Published on
ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ ಮುಖ್ಯಮಂತ್ರಿ ಅನುದಾನ 25 ಕೋಟಿ ರೂ. ಒಳಗೊಂಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೇಳಿದರು.
ತಾಲೂಕಿನ ಮುತ್ಯಾನಟ್ಟಿ ವಲಯದಲ್ಲಿ ಹೊಸದಾಗಿ ನಿರ್ಮಿಸಿದ 5 ಲ ಲೀಟರ್​ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿನ ನಿವಾಸಿಗಳಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್​ ಸೇರಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದರು.
ಮುತ್ಯಾನಟ್ಟಿ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದ್ದು, ದಿನದ 24 ಗಂಟೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸಲು 5 ಲ ವೆಚ್ಚದಲ್ಲಿ ನೀರಿನ ಸಂಗ್ರಹಣ ಟಕ ನಿರ್ಮಿಸಲಾಗಿಲಾಗಿದೆ. ಕೆ.ಯು.ಐ.ಡಿ.ಎಫ್​.ಸಿ., ಮಹಾನಗರ ಪಾಲಿಕೆ, ವಿಶ್ವಬ್ಯಾಂಕ್​ ಕೆಯುಡಬ್ಲು$್ಯಎಸ್​ಎಂಪಿ ದಿನದ 24 ನಿರಂತರ ನೀರು ಸರಬರಾಜು ಯೋಜನೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ವಿದ್ಯುತ್​ ಸಂಪರ್ಕವಿಲ್ಲದೆ ಮೇಲ್ಮಟ್ಟದ ನೀರು ಸಂಗ್ರಹಣ ಟಕದಿಂದ ಇಳಿಜಾರು ಮೂಲಕ ನೀರು ಸರಬರಾಜು ಮಾಡಲಾಗುವುದು. 4 ಸಾವಿರ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಿದಂತಾಗಿದೆ. ಜಿಲ್ಲೆಯ ವಿವಿಧೆಡೆ ಇದೇ ರೀತಿ ನೀರು ಸಂಗ್ರಹಣ ಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು. ಶಾಸಕ ಆಸೀಫ್​ ಸೇಠ್​, ಕೆ.ಯು.ಐ.ಡಿ.ಎಫ್​.ಸಿ. ಅಧ್ಯ ನಾರಾಯಣಸ್ವಾಮಿ ಮಾತನಾಡಿದರು. ಮೇಯರ್​ ಮಂಗೇಶ ಪವಾರ್​, ಉಪಮೇಯರ್​ ವಾಣಿ ಜೋಶಿ, ಆಯುಕ್ತ ಎಂ.ಕಾರ್ತಿಕ್​, ಮುಖ್ಯ ಅಭಿಯಂತರ ನಂದೀಶ ಜಿ.ಆರ್​. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net