ಮಲ್ಲಮ್ಮ ಭವನ ನಿರ್ಮಾಣಕ್ಕೆ 1 ಕೋಟಿ ರೂ.

ಯರಗಟ್ಟಿ ಸಮೀಪದ ರೈನಾಪುರಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ವಿಠ್ಠಲ ಬಂಟನೂರ, ಎಸ್.ಎ್.ಸಿದ್ನಾಳ, ರಾಜು ಕಳ್ಳಿಗುದ್ದಿ, ವೆಂಕಣ್ಣ ಕಳ್ಳಿಗುದ್ದಿ ಇತರರಿದ್ದರು.
ಯರಗಟ್ಟಿ ಸಮೀಪದ ರೈನಾಪುರಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ವಿಠ್ಠಲ ಬಂಟನೂರ, ಎಸ್.ಎ್.ಸಿದ್ನಾಳ, ರಾಜು ಕಳ್ಳಿಗುದ್ದಿ, ವೆಂಕಣ್ಣ ಕಳ್ಳಿಗುದ್ದಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಶ್ವಾಸ ವೈದ್ಯ ಭರವಸೆ
  • ರೈನಾಪುರದಲ್ಲಿ ಜಯಂತ್ಯುತ್ಸವ
ಯರಗಟ್ಟಿ: ರೈನಾಪುರ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಭವನ ನಿರ್ಮಾಣಕ್ಕೆ ಸರ್ಕಾರದ ವಿಶೇಷ ಅನುದಾನದಲ್ಲಿ 1 ಕೋಟಿ ರೂ. ಮಂಜೂರಾತಿ ಮಾಡಲಾಗುವುದು ಅದಕ್ಕೆ ಸೂಕ್ತ ಸ್ಥಳ ಗುರುತಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ರೈನಾಪುರ ಗ್ರಾಮಸ್ಥರು ಈಚೆಗೆ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಡ್ಡಿ ಸಮಾಜವು ಗ್ರಾಮಗಳಲ್ಲಿ ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸಿ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ರೈನಾಪುರ ರೈತಾಪಿ ಕುಟುಂಬಗಳಿಂದ ಕುಡಿದ್ದು, ಇಲ್ಲಿನ ರೈತರ ಅನುಕೂಲಕ್ಕಾಗಿ ಕೃಷಿ ಪತ್ತಿನ ಸಂಘದ ಜಾಗೆಯಲ್ಲಿ ಗೋದಾಮು ನಿರ್ಮಾಣ ಮಾಡಲಾಗುವುದು, ಅಲ್ಲದೇ ಸಾರ್ವಜನಿಕರ ಬೇಡಿಕೆಯಂತೆ ಗ್ರಾಮದ ಮುಖ್ಯ ರಸ್ತೆಗೆ ಸ್ವಾಗತ ಕಮಾನು ನಿರ್ಮಾಣಕ್ಕೆ ಸಹಕಾರ ಒದಗಿಸಲಾಗುವುದು ಎಂದರು.
ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ ಮಾತನಾಡಿದರು. ಹಿರಿಯರಾದ ಎಸ್.ಎ್.ಸಿದ್ನಾಳ, ರಾಜು ಕಳ್ಳಿಗುದ್ದಿ, ವೆಂಕಣ್ಣ ಕಳ್ಳಿಗುದ್ದಿ, ಅಶೋಕ ಹುಲಕುಂದ, ವಿಠ್ಠಲ ಹುಲಕುಂದ, ಶಂಕರ ಇಟ್ನಾಳ, ಪ್ರಕಾಶ ವಾಲಿ, ನಿಲಕಂಠ ಸಿದ್ದಬಸನ್ನವರ, ವಿಠ್ಠಲ ದೇವರಡ್ಡಿ, ಪ್ರಜ್ವಲ ಗೌಡರ, ಛಾಯಪ್ಪ ಹುಂಡೇಕರ, ಮಲಿಕಸಾಬ್ ಬಾಗವಾನ, ಸುರೇಶ ಬಂಟನೂರ, ವಿನೋದ ಕಳ್ಳಿಗುದ್ದಿ, ಭೀಮರಡ್ಡಿ ಸಿದ್ನಾಳ, ವಿಠ್ಠಲ ಗಲಬಿ, ಕಲ್ಲಪ್ಪ ಕಡೆಮನಿ, ಮನಮಂತ ಸಿದ್ನಾಳ, ಈರಪ್ಪ ಬಾಗೋಡಿ, ಬಸು ಪಟ್ಟಣಶೆಟ್ಟಿ, ಗೌಡಪ್ಪ ಉದಪುಡಿ, ವೆಂಕಣ್ಣ ಹುರಕನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net