ಜತ್ರಾಟ್‌ನ ಲಕ್ಷ್ಮೀ ದೇವಸ್ಥಾನದಿಂದ ವೇದಗಂಗಾ ನದಿವರೆಗೆ 1.2 ಕಿಮೀ ರಸ್ತೆ ಕಾಮಗಾರಿಗೆ ಎಂ.ಪಿ.ಪಾಟೀಲ ಹಾಗೂ ರಮೇಶ ಭೀವಶೆ ಚಾಲನೆ ನೀಡಿದರು. ಸಿದ್ದು ನರಾಟೆ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ ಇತರರಿದ್ದರು.
ನಿಪ್ಪಾಣಿ:ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ನಿಪ್ಪಾಣಿ ಕ್ಷೇತ್ರಕ್ಕೆ ಸಮಗ್ರ ಅಭಿವೃದ್ಧಿಯ ದಿಕ್ಕು ದೊರೆತಿದ್ದು, ಕೃಷಿ ಅಭಿವೃದ್ಧಿಗೆ ಪೂರಕವಾಗುವಂತೆ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹಾಲಶುಗರ್ ಅಧ್ಯಕ್ಷ ಎಂ.ಪಿ.ಪಾಟೀಲ ಹೇಳಿದರು.
ಪಟ್ಟಣದ ಜತ್ರಾಟ್‌ನ ಲಕ್ಷ್ಮೀ ದೇವಸ್ಥಾನದಿಂದ ವೇದಗಂಗಾ ನದಿವರೆಗೆ 50 ಲಕ್ಷ ರೂ. ವೆಚ್ಚದ 1.2 ಕಿಮೀ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೃಷಿ ಉತ್ಪನ್ನ, ರಾಸಾಯನಿಕ ಗೊಬ್ಬರ ಹಾಗೂ ಕೃಷಿ ಉಪಕರಣಗಳ ಸಾಗಣೆಗೆ ರಸ್ತೆ ಅವಶ್ಯವಾಗಿದ್ದು, ರಸ್ತೆ ಅಭಿವೃದ್ಧಿಯೇ ಕೃಷಿಗೆ ಬಲ ನೀಡುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದು ನರಾಟೆ ಮಾತನಾಡಿ, ಈ ರಸ್ತೆ ಜತ್ರಾಟ್ ಸೇರಿದಂತೆ ಶ್ರೀಪೇವಾಡಿ, ನಾಂಗನೂರು,