ಒನ್ ಟೈಮ್‌ ಸೆಟಲ್‌ಮೆಂಟ್‌ ಪರಿಷ್ಕರಿಸಿ

ಜಿಲ್ಲಾ‌ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ‌ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬೆಳಗಾವಿ:
ಒನ್ ಟೈಮ್‌ ಸೆಟಲ್‌ಮೆಂಟ್‌ ಹೆಸರಿನಲ್ಲಿ ಸರ್ಕಾರ ರಾಜ್ಯದ ಕ್ವಾರಿ ಹಾಗೂ ಸ್ಟೋನ್ ಕ್ರಷರ್‌ ಮಾಲೀಕರಿಂದ ದಂಡ ವಸೂಲಿ ನೋಟೀಸ್ ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಕಲ್ಲು, ಕ್ವಾರಿ, ಜಲ್ಲಿಕ್ರಷಸ್(,ಎಂ.ಸ್ಯಾಂಡ್ ಬಂದ್ ಬಂದ್ ಮಾಡುತ್ತೇವೆಎಂದು ಜಿಲ್ಲಾ‌ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ತಲಾತಲಾಂತರಗಳಿಂದ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಒಕ್ಕಲೆಬ್ಬಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸರ್ಕಾರ ರತ್ನಗಂಬಳಿ ಹಾಸುವ ಹುನ್ನಾರದಲ್ಲಿ ತೊಡಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನಗಳಿಂದ ಕಲ್ಲುಗಣಿಗಾರಿಕೆಯಲ್ಲಿ ತೊಡಗಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂಬಾಕಿ ರಾಜಧನವನ್ನು ವಸೂಲಿ ಮಾಡುವ ಒಟಿಎಸ್ ಯೋಜನೆಗೆ ನಮ್ಮ ಸಹಮತವಿಲ್ಲ‌ಎಂದು ಹೇಳಿದರು.

ಸರ್ಕಾರಕ್ಕೆ ಹಣ ಸಂದಾಯವಾಗಿರುವುದರಿಂದ ಮತ್ತೆ ಗಣಿಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಇಂದಿಗೂ ಪಾವತಿಸಿಕೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಎಲ್ಲಾ ರೀತಿಯ ರಾಜಧನ ಈಗಾಗಲೇ ಸಂದಾಯವಾಗಿದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರರಿಂದ ವಸೂಲಿ ಮಾಡಬಾರದು‌ ಎಂದು ಒತ್ತಾಯಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (ಕೆಎಸ್‌ಆರ್‌ಎಸ್‌ಎಸಿ) ಕಾಯ್ದೆ 1994ರ ಕರ್ನಾಟಕ ಮೈನರ್ ಮಿನರಲ್ಸ್ ರಿಯಾಯತಿ ನಿಯಮಗಳಿಗೆ ತಿದ್ದುಪಡಿ ತಂದು ಯಾವುದೇ ಅಡಚಣೆ ಇಲ್ಲದೆ ಕ್ರಷರ್‌ಗಳನ್ನು ನಡೆಸಲು ದಾರಿ ಮಾಡಿಕೊಡಬೇಕು.‌ದಂಡದ ನೋಟೀಸ್ ರದ್ದುಪಡಿಸಬೇಕು. ಹೊಸ ತಿದ್ದುಪಡಿ ‌ಕೈಬಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಅಧ್ಯಕ್ಷ ವಸಂತ ತಹಸೀಲ್ದಾರ,‌ಬಾಲಾಸಾಹೇಬ್ ಧಾಮ್ನೇಕರ್, ಸಂದೀಪ ಓಲ್ಕರ್, ಸಂಕೇತ್ ಮಜ್ರೇಕರ್, ಅಮಿತ ಚೌಗುಲೆ,‌‌ ಮಾಣಿಕ್‌ನಿಲಾಜ್ಕರದ, ರಾಜು ಗುಂಡೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net