ಸಾಹಿತ್ಯ ವಿಮರ್ಶೆಯಲ್ಲಿ ಲೋಕ ಗ್ರಹಿಕೆ ಇದೆ

ಬೆಳಗಾವಿಯಲ್ಲಿ ಏರ್ಪಡಿಸಿದ್ದ ವಿಮರ್ಶಾ ಕಮ್ಮಟವನ್ನು ಡಾ.ಗುರುದೇವಿ ಹುಲೆಪ್ಪನವರಮಠ ಉದ್ಘಾಟಿಸಿದರು.
ಬೆಳಗಾವಿಯಲ್ಲಿ ಏರ್ಪಡಿಸಿದ್ದ ವಿಮರ್ಶಾ ಕಮ್ಮಟವನ್ನು ಡಾ.ಗುರುದೇವಿ ಹುಲೆಪ್ಪನವರಮಠ ಉದ್ಘಾಟಿಸಿದರು.
Published on
ಬೆಳಗಾವಿ: ಭಾರತೀಯರಲ್ಲಿ ವಿಮರ್ಶೆಯು ಕಾವ್ಯ ಮೀಮಾಂಸೆಯಾಗಿತ್ತು. ರಸ, ಧ್ವನಿ, ಅಲಂಕಾರ, ಔಚಿತ್ಯಗಳ ಚರ್ಚೆಯು ಬೆಳೆಯುತ್ತ ಆಧುನಿಕ ಕಾವ್ಯ ವಿಮರ್ಶೆಯ ಚರ್ಚೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಮೀಮಾಂಸೆಗಳು ಬೆರೆತು ಬಂದಿದ್ದು, ಅಂತಿಮವಾಗಿ ವಿಮರ್ಶೆಯಲ್ಲಿ ಲೋಕ ಗ್ರಹಿಕೆ ಇದೆ ಎಂದು ಹಿರಿಯ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕವು ಕನ್ನಡ ಸಾಹಿತ್ಯ ಭವನ ವಿಶ್ವಸ್ಥಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಮರ್ಶಾ ಕಮ್ಮಟದಲ್ಲಿ ಮಾತನಾಡಿ, ಬಿಎಂಶ್ರೀಯಿಂದ ಕುವೆಂಪುರವರ ದರ್ಶನ ಮೀಮಾಂಸೆಯ ತನಕ ವಿಮರ್ಶೆ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಡಾ.ತಾರಿಣಿ ಶುಭದಾಯಿನಿ ಮಾತನಾಡಿ, ಬುದ್ಧಿಯನ್ನು ಸೃಜನಾತ್ಮಕವಾಗಿಸುವ ಬೌದ್ಧಿಕ ಚಟುವಟಿಕೆಯ ಒಂದು ಭಾಗವೇ ವಿಮರ್ಶೆಯಾಗಿದ್ದು, ಸಮಗ್ರವಾದ ಓದು, ವಿವಿಧ ಜ್ಞಾನ ಶಾಖೆಗಳ ಅರಿವು ವಿಮರ್ಶಕರಿಗಿರಬೇಕು ಎಂದರು.
ಡಾ.ಗುರುದೇವಿ ಹುಲೆಪ್ಪನವರ ಮಠ ಕಮ್ಮಟ ಉದ್ಘಾಟಿಸಿ, ವಿಮರ್ಶೆಯ ಇಂದಿನ ಅನಿವಾರ್ಯತೆ ಮತ್ತು ಉಪಯೋಗಗಳನ್ನು ವಿವರಿಸಿದರು.
ಸಂಘ ಜಿಲ್ಲಾ ಅಧ್ಯಕ್ಷೆ ಡಾ.ಕೆ.ಆರ್.ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಭವನ ವಿಶ್ವಸ್ಥಮಂಡಳಿ ಗೌರವ ಕಾರ್ಯದರ್ಶಿ ಆರ್.ಬಿ.ಕಟ್ಟಿ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. 40 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಂಘದ ಸಹ ಕಾರ್ಯದರ್ಶಿ ರಾಜನಂದಾ ಗಾರ್ಗಿ, ಸುಧಾ ಪಾಟೀಲ, ಡಾ.ರಂಜನಾ ಗೋಧಿ, ಶಶಿಧರ ಹೊಸಕೋಟೆ, ನೀಲಗಂಗಾ ಚರಂತಿಮಠ, ಲಲಿತಾ ಕೋಪರ್ಡೆ, ಪ್ರೊ.ಸಿದ್ಧನಗೌಡ ಚೋಬಾರಿ, ಸುಮಿತ್ರ ಚೋಬಾರಿ, ಪ್ರೊ.ಶಿಂತ್ರಿ, ಹಮೀದಾ ಬೇಗಂ ದೇಸಾಯಿ, ಪುಷ್ಪ ಮುರಗೋಡ, ಕವಿತಾ ಕುಸಗಲ್ಲ ಇತರರಿದ್ದರು.
ಪುಷ್ಪ ಮುರಗೋಡ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಜ್ಯೋತಿ ಬಾದಾಮಿ ಸ್ವಾಗತಿಸಿದರು. ಡಾ.ನೀತಾ ರಾವ ನಿರೂಪಿಸಿದರು. ಕಾರ್ಯದರ್ಶಿ ಡಾ ನಿರ್ಮಲಾ ಬಟ್ಟಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net