ಚುನಾವಣಾ ಆಯೋಗದ ಆದೇಶ ಮತ್ತು ನಡಾವಳಿಗಳ ಪ್ರಕಾರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಮತಕ್ಷೇತ್ರಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನು ತಮಗೆ ಕೊಡಲಾಗಿರುವ ಗಣತಿ ನಮೂನೆಯನ್ನು ಸರಿಯಾದ ಮಾಹಿತಿ ಸಹಿತ ಭರ್ತಿ ಮಾಡಬೇಕು. ಈ ಕುರಿತು ಯಾವುದೇ ಗೊಂದಲ, ಸಂಶಯಗಳಿದ್ದಲ್ಲಿ ಬಿಎಲ್ಒ, ಮೇಲ್ವಿಚಾರಕರು ಇಲ್ಲವೇ ಪಾಲಿಕೆಯ ಚುನಾವಣಾ ವಿಭಾಗದ ಸಹಾಯ ಪಡೆಯಬಹುದು. ಈ ಬಗ್ಗೆ ಯಾವುದೇ ಭಯ, ಆತಂಕ ಬೇಡ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.