ಗುರುಗಳನ್ನು ಗೌರವಿಸುವ ಕಾರ್ಯ ಶ್ಲಾಘನೀಯ

ಸಿದ್ಧೇಶ್ವರ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಡಾ.ಅಭಿನವ ಬ್ರಹ್ಮಾನಂದ ಶ್ರೀ, ಎಂ.ಬಿ.ಕೊರಬು, ಸಾತಗೌಡ ಪಾಟೀಲ ಇತರರಿದ್ದರು.
ಸಿದ್ಧೇಶ್ವರ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಡಾ.ಅಭಿನವ ಬ್ರಹ್ಮಾನಂದ ಶ್ರೀ, ಎಂ.ಬಿ.ಕೊರಬು, ಸಾತಗೌಡ ಪಾಟೀಲ ಇತರರಿದ್ದರು.
Published on
ಕಾಗವಾಡ: ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಗುರುವಂದನಾ ಕಾರ್ಯಕ್ರಮ ಸಮಾಜಕ್ಕೆ ಆದರ್ಶದ ಕನ್ನಡಿಯಾಗಿದೆ ಎಂದು ಪರಮಾನಂದವಾಡಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಶ್ರೀ ಹೇಳಿದರು.
ಶಿರಗುಪ್ಪಿ ಗ್ರಾಮದ ಸಿದ್ಧೇಶ್ವರ ವಿದ್ಯಾಲಯ ಮತ್ತು ವಿದ್ಯಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2000-2021ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ನೈತಿಕ ಮೌಲ್ಯ ಕಳೆದುಕೊಳ್ಳುತ್ತಿರುವ ಸಮಯದಲ್ಲಿ 25 ವರ್ಷಗಳ ಹಿಂದೆ ತಾವು ಕಲಿತ ಶಾಲೆ ಹಾಗೂ ಗುರುಗಳನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಂ.ಬಿ.ಕೊರಬು, ಸಿದ್ಧೇಶ್ವರ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಾತಗೌಡ ಪಾಟೀಲ, ನಿವೃತ್ತ ಶಿಕ್ಷಕ ಆರ್.ಎಂ.ಚೌಗುಲೆ, ಎಸ್. ಐ.ಮಾಳಿ, ಆರ್.ಬಿ.ಪಾಟೀಲ, ಕೆ.ಎಸ್.ಗುರವ, ಎ.ಎಸ್.ಶಹಾಪುರೆ, ಎ.ಎಸ್.ಪಾಟೀಲ, ಆರ್.ಎ.ಮಗದುಮ್ಮ, ಬಿ.ಟಿ.ಕರೆಪ್ಪಗೋಳ, ಸವಿತಾ ಮಿರ್ಜೆ, ಮಹಾದೇವಿ ಸಾತಗೌಡರ, ಸುವರ್ಣಾ ಮಿಣಚೆ, ಸಂಗೀತಾ ತಾರದಾಳೆ, ಸಿ.ಬಿ.ಪಾಟೀಲ, ಡಿ.ಬಿ.ಪಾಟೀಲ, ಬಾಳು ತಾರದಾಳೆ, ತಮ್ಮಾಣಿ ಹಂಚಿನಾಳೆ, ಮಲ್ಲಪ್ಪ ಮಡಿವಾಳೆ, ಅಜಿತ ಹೈಬತ್ತೆ, ಜೈತುನಬಿ ಮುಲ್ಲಾ, ಈರಗೌಡ ಚಂದೂರೆ, ಮಿಲಿಂದ ಖಿಚಡೆ ಇತರರಿದ್ದರು. ರುದ್ರಗೌಡಾ ಪಾಟೀಲ, ಮೇಘಾ ಕುಸನಾಳೆ ನಿರೂಪಿಸಿದರು. ಅಪ್ಪಾಸಾಹೇಬ ಮಗದುಮ್ಮ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net