ಪ್ರಾಮಾಣಿಕ ಸೇವೆಗೆ ಗೌರವ ಖಚಿತ

ಚಿಕ್ಕೋಡಿಯ ಆರ್.ಡಿ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಪಿ.ಐ.ಭಂಡಾರಿ ಮಾತನಾಡಿದರು. ಅಭಿನವಲಿಂಗ ಸ್ವಾಮೀಜಿ, ಎಸ್.ಬಿ.ಪೂಜಾರಿ, ವಿ.ಪಿ.ಶೇಡಬಾಳ, ಸೀತಾರಾಮು ಆರ್.ಎಸ್., ಡಾ.ಪ್ರವೀಣ ಭಂಡಾರಿ ಇತರರಿದ್ದರು.
ಚಿಕ್ಕೋಡಿಯ ಆರ್.ಡಿ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಪಿ.ಐ.ಭಂಡಾರಿ ಮಾತನಾಡಿದರು. ಅಭಿನವಲಿಂಗ ಸ್ವಾಮೀಜಿ, ಎಸ್.ಬಿ.ಪೂಜಾರಿ, ವಿ.ಪಿ.ಶೇಡಬಾಳ, ಸೀತಾರಾಮು ಆರ್.ಎಸ್., ಡಾ.ಪ್ರವೀಣ ಭಂಡಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿನವಲಿಂಗ ಸ್ವಾಮೀಜಿ ಅಭಿನುಡಿ
  • ನಿವೃತ್ತ ಡಿಡಿಪಿಯುಗೆ ಸನ್ಮಾನ
ಚಿಕ್ಕೋಡಿ: ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಸಮಾಜದಲ್ಲಿ ಹೇಗೆ ಗೌರವ ದೊರೆಯುತ್ತದೆ ಎಂಬುವುದಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ (ಡಿಡಿಪಿಯು) ಪಿ.ಐ.ಭಂಡಾರಿ ಸಾಕ್ಷಿ ಎಂದು ಕಕಮರಿ ಮಠದ ಅಭಿನವಲಿಂಗ ಸ್ವಾಮೀಜಿ ಅಭಿನುಡಿ ವ್ಯಕ್ತಪಡಿಸಿದರು.
ಆರ್.ಡಿ.ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರು ಮಕ್ಕಳ ಭವಿಷ್ಯಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಭಂಡಾರಿ ಅವರು ನಿವೃತ್ತಿ ನಂತರದ ಜೀವನವನ್ನು ಕುಟುಂಬ ಮತ್ತು ಸಮಾಜದ ಸೇವೆಗೆ ವಿನಿಯೋಗಿಸಲಿ ಎಂದು ಆಶೀರ್ವದಿಸಿದರು.
ನಿವೃತ್ತ ಪ್ರಾಧ್ಯಾಪಕ ಎನ್.ವಿ.ಶಿರಗಾಂವಕರ ಮಾತನಾಡಿ, ಪಿ.ಐ.ಭಂಡಾರಿ ಕಳೆದ ೫ ವರ್ಷಗಳಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾದರಿ ಕಾರ್ಯ ನಿರ್ವಹಿಸಿದ್ದರೆ. ಅವರ ಅವಿರತ ಪ್ರಯತ್ನದಿಂದಾಗಿಯೇ ಇಂದು ಚಿಕ್ಕೋಡಿಯಲ್ಲಿ ಡಿಡಿಪಿಯು ಕಚೇರಿಯ ನೂತನ ಕಟ್ಟಡ ತಲೆಯೆತ್ತುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಐ.ಭಂಡಾರಿ, ನಾನು ಶಿಕ್ಷಣ ಇಲಾಖೆಯಲ್ಲಿ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಈ ಯಶಸ್ಸಿಗೆ ಕುಟುಂಬ, ಸಹೋದ್ಯೋಗಿಗಳು ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಎಂ.ಆರ್.ಭಂಡಾರಿ, ಅನುಸೂಯಾ ಭಂಡಾರಿ, ನಿವೃತ್ತ ಉಪನಿರ್ದೇಶಕ ಎಸ್.ಬಿ.ಪೂಜಾರಿ, ಸಿಟಿಇ ಸಂಸ್ಥೆ ನಿರ್ದೇಶಕ ವಿ.ಪಿ.ಶೇಡಬಾಳ, ಡಿಡಿಪಿಐ ಸೀತಾರಾಮು ಆರ್.ಎಸ್., ಡಾ.ಪ್ರವೀಣ ಭಂಡಾರಿ, ಎಂ.ಎ.ಚೌಗಲಾ, ಪ್ರಕಾಶ ಮನಗೂಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net