ಬೆಳಕೂಡ ಗ್ರಾಮದ ಲಕ್ಷ್ಮೀದೇವಿ ಹಾಗೂ ಹನುಮಾನ ದೇವರ ಓಕುಳಿ ಅಂಗವಾಗಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಕೇಸರಿ ಕಾರ್ತಿಕ ಕಾಟೆಗೆ ಡಾ.ಎಂ.ಬಿ.ಕುಂಬಾರ ಬಹುಮಾನ ವಿತರಿಸಿದರು. ಎ.ಎಸ್. ಪಾಶ್ಚಾಪುರೆ, ಬಸವರಾಜ ಕುಂಬಾರ ಇತರರಿದ್ದರು.
ಸಮೀಪದ ಬೆಳಕೂಡ ಗ್ರಾಮದ ಲಕ್ಷ್ಮೀದೇವಿ ಹಾಗೂ ಹನುಮಾನ ದೇವರ ಓಕುಳಿ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಕೇಸರಿ ಕಾರ್ತಿಕ ಕಾಟೆಗೆ ಬಹುಮಾನ ವಿತರಿಸಿ ಮಾತನಾಡಿ, ಇಡೀ ದಿನ ಕೃಷಿ ಹಾಗೂ ವಿವಿಧ ಕಾಯಕದಲ್ಲಿ ತೊಡಗುವ ಗ್ರಾಮೀಣ ಭಾಗದ ಜನರು ವರ್ಷಕ್ಕೊಮ್ಮೆ ಜರುಗುವ ಜಾತ್ರೆಗಳಲ್ಲಿ ಪಾಲ್ಗೊಂಡು ಸಂತೋಷ ಪಡುತ್ತಾರೆ ಎಂದರು.
ಎ.ಎಸ್.ಪಾಶ್ಚಾಪುರೆ ಮಾತನಾಡಿದರು. ನಾಲ್ಕು ದಿನದ ಜಾತ್ರೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಎತ್ತು ಹಾಗೂ ಕುದುರೆ ಗಾಡಿ ಶರ್ಯತ್ತು ಮತ್ತು ಸೈಕಲ್ ಸ್ಪರ್ಧೆ, ಚೌಡಿಕೆ ಪದ, ನಾಟಕ ಹೀಗೆ ವಿವಿಧ ಕಾರ್ಯಕ್ರಮ ನಡೆದವು.