ಐತಿಹಾಸಿಕ ಬಾವಿಗೆ ಕಾಯಕಲ್ಪ

ಬೆಳಗಾವಿ ತಾಲೂಕಿನ ಮುತಗಾ ಬಾವಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಡಾ.ಮಾಧವ ಪ್ರಭು, ಅಭಿಷೇಕ ಡಾಗಾ, ದೀಪಕ ಓಳಕರ, ಅವಧೂತ ಸಾಮಂತ, ಅಜಯ ಆಚಾರ್ಯ, ಸೂರ್ಯಕಾಂತ ಹಿಂಡಲಗೇಕರ, ಡಾ.ಅಶ್ವಿನಿ ನರಸಣ್ಣವರ ಇತರರು ಇದ್ದರು.
ಬೆಳಗಾವಿ ತಾಲೂಕಿನ ಮುತಗಾ ಬಾವಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಡಾ.ಮಾಧವ ಪ್ರಭು, ಅಭಿಷೇಕ ಡಾಗಾ, ದೀಪಕ ಓಳಕರ, ಅವಧೂತ ಸಾಮಂತ, ಅಜಯ ಆಚಾರ್ಯ, ಸೂರ್ಯಕಾಂತ ಹಿಂಡಲಗೇಕರ, ಡಾ.ಅಶ್ವಿನಿ ನರಸಣ್ಣವರ ಇತರರು ಇದ್ದರು.
Published on
ಬೆಳಗಾವಿ: ಬೆಳಗಾವಿ ನಗರ ಹಾಗೂ ಸುತ್ತಲಿನ ಭಾಗದಲ್ಲಿರುವ ಹಳೇ ತೆರೆದ ಬಾವಿಗಳನ್ನು ಪುನರುತ್ಥಾನಗೊಳಿಸುವ ಸಂಕಲ್ಪ ಮಾಡಿರುವ ಪ್ಯಾಸ್ ಫೌಂಡೇಷನ್, ಮುತಗಾದಲ್ಲಿರುವ 200 ವರ್ಷ ಹಳೆಯ ಬಾವಿಯ ಪುನಶ್ಚೇತನಕ್ಕೆ ಚಾಲನೆ ನೀಡಿದೆ.
ಕೆಎಲ್‌ಇ ಎನ್‌ಎಸ್‌ಎಸ್ ಯೂನಿಟ್‌ನ ಸ್ವಯಂ ಸೇವಕರು, ಪ್ಯಾಸ್ ಫೌಂಡೇಷನ್ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ಶ್ರಮದಾನದ ಮೂಲಕ ಬಾವಿಯೊಳಗಿನ ಹೂಳು, ಕಲ್ಲುಗಳು ಮತ್ತು ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿದರು.
ಶಿವಲಿಂಗದ ಆಕಾರದಲ್ಲಿರುವ ಬಾವಿಗೆ ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಮುತಗಾ, ಕಂಚವೀರ ನಗರ ಮತ್ತು ಸುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಮೂಲವಾಗಿಸುವ ಗುರಿ ಹೊಂದಿದ್ದಾರೆ.
ಹಿಂದಿನ ಕಾಲದಲ್ಲಿ ಕುದುರೆಗಳು ಸುಲಭವಾಗಿ ನೀರು ಕುಡಿಯಲು ಅನುಕೂಲವಾಗುವಂತೆ ಈ ಬಾವಿಯನ್ನು ವಿನ್ಯಾಸಗೊಳಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂದು ಹಿರಿಯರು ಹೇಳಿದರು.
ಪ್ಯಾಸ್ ಫೌಂಡೇಷನ್‌ನ ಡಾ.ಮಾಧವ ಪ್ರಭು, ಅಭಿಷೇಕ ಡಾಗಾ, ದೀಪಕ ಓಳಕರ, ಅವಧೂತ ಸಾಮಂತ, ಅಜಯ ಆಚಾರ್ಯ, ಸೂರ್ಯಕಾಂತ ಹಿಂಡಲಗೇಕರ, ಡಾ.ಅಶ್ವಿನಿ ನರಸಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net