ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ

ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ತಿದ್ದುಪಡಿ ಕುರಿತು ಜಾಗತಿ ಜಾಥಾಕ್ಕೆ ನಿಂಗಪ್ಪ ಮಸಳಿ ಚಾಲನೆ ನೀಡಿದರು. ವಿಜಯ ಪಾಟೀಲ, ಗೌಡಪ್ಪ ಗಿರಿಮಲ್ಲಣವರ ಲಿಂಗರಾಜ ಹಲಕರ್ಣಿಮಠ ಇತರರಿದ್ದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ತಿದ್ದುಪಡಿ ಕುರಿತು ಜಾಗತಿ ಜಾಥಾಕ್ಕೆ ನಿಂಗಪ್ಪ ಮಸಳಿ ಚಾಲನೆ ನೀಡಿದರು. ವಿಜಯ ಪಾಟೀಲ, ಗೌಡಪ್ಪ ಗಿರಿಮಲ್ಲಣವರ ಲಿಂಗರಾಜ ಹಲಕರ್ಣಿಮಠ ಇತರರಿದ್ದರು.
Published on
ಚನ್ನಮ್ಮನ ಕಿತ್ತೂರು:
ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಾಗತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, 18 ವರ್ಷ ಪೂರ್ಣಗೊಂಡ ಯುವಜನರು ಸೇರಿದಂತೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳುವವರು,
ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಅಥವಾ ಇತರೆ ವಿವರಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕಿರುವವರು ಹಾಗೂ ಮತಕ್ಷೇತ್ರ ವರ್ಗಾವಣೆ ಮಾಡಿಸಿಕೊಳ್ಳಬೇಕಿರುವ ಎಲ್ಲ ಅರ್ಹ ಮತದಾರರು ಚುನಾವಣಾ ಆಯೋಗ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಹಾಯಕ ನಿರ್ದೇಶಕ (ಪಂರಾ) ವಿಜಯ ಪಾಟೀಲ, ಯೋಜನಾಧಿಕಾರಿ ಗೌಡಪ್ಪ ಗಿರಿಮಲ್ಲಣವರ, ತಾಲೂಕು ಪಂಚಾಯಿತಿ ಸಿಬ್ಬಂದಿ ಲಿಂಗರಾಜ ಹಲಕರ್ಣಿಮಠ, ಸಂಗನಗೌಡ ಹಂದ್ರಾಳ, ರಾಜೇಶ್ವರಿ ಪಟ್ಟಣಶೆಟ್ಟಿ, ಲಚ್ಚಪ್ಪ ಗೊಡಚಿ, ಪ್ರಕಾಶ ಗುಂಡಗಾವಿ, ಎನ್‌ಆರ್‌ಎಲ್‌ಎಂ ಸಂಘದ ಮಹಿಳೆಯರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net