ಇಲ್ಲಿರುವ ಅಂಗಡಿಗಳಲ್ಲಿ ಪ್ಲಾೃಸ್ಟಿಕ್ ಬ್ಯಾಗ್ ಬದಲಿಗೆ ಸಂಪೂರ್ಣ ಬಟ್ಟೆ ಬ್ಯಾಗ್ ಬಳಸುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಎಣ್ಣೆಹೊಂಡ ಮತ್ತು ಜೋಗುಳಬಾವಿಯಲ್ಲಿ ಸ್ನಾನ ಮಾಡಿ ಹಾಗೂ ದೀರ್ಘದಂಡ ನಮಸ್ಕಾರದ ಬಳಿಕ ಎಸೆಯುವ ಒದ್ದೆ ಬಟ್ಟೆಗಳನ್ನು ಸಂಗ್ರಹಿಸಿ, ಅವುಗಳನ್ನು ಒಣಗಿಸುತ್ತಿದ್ದು, ಅದರಲ್ಲಿ ಉತ್ತಮವಾಗಿರುವ ಸೀರೆ, ಬಟ್ಟೆ, ಪ್ಯಾಂಟ್‌ಗಳನ್ನು ಮರುಬಳಕೆಗೆ ನೀಡುತ್ತಿದ್ದಾರೆ. ಉಳಿದ ಬಟ್ಟೆಗಳನ್ನು ಸಂಸ್ಕರಿಸಿ, ಅವುಗಳಿಂದಲೇ ಬ್ಯಾಗ್ ತಯಾರಿಸಿ, ಇಲ್ಲಿರುವ ಅಂಗಡಿಗಳಿಗೆ ನೀಡಲು ಯೋಜನೆ ರೂಪಿಸಿದ್ದು, ಜೋಗುಳಬಾವಿ ಪರಿಸರದಲ್ಲೇ ಬ್ಯಾಗ್ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ.