ಈಗಾಗಲೇ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಅನ್ನದಾನ, ಯುವಕರಿಗೆ ಕೌಶಲ ಮಾರ್ಗದರ್ಶನ ಸೇರಿದಂತೆ ಅನೇಕ ಕಾರ್ಯ ಮಾಡಿರುವ "ಬೆಳಗಾವಿ ಆರ್ಸಿಬಿ ಅಭಿಮಾನಿ ಬಳಗ' ಈ ಸಲದ ಐಪಿಎಲ್ನಲ್ಲಿ ತಂಡದ ಗೆಲುವಿಗಾಗಿ ರಾಣಿ ಚನ್ನಮ್ಮಾಜಿಯ ಹುಟ್ಟೂರು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಕೋಟೆಯನ್ನು ಸ್ವಚ್ಛಗೊಳಿಸಿದೆ. ಆರ್ಸಿಬಿ ಜರ್ಸಿಯ ಟೀ ಶರ್ಟ್ ಧರಿಸಿ ಮೂರ್ನಾಲ್ಕು ತಾಸು ಶ್ರಮದಾನ ಮಾಡಿ, ಕಸಕಂಟಿ ತೆರವುಗೊಳಿಸಿದರು.