ರಾಯಬಾಗ: ಅಂಗವಿಕಲರ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು..ಶಾಸಕರ ಗೃಹ ಕಚೇರಿ ಆವರಣದಲ್ಲಿ ಭಾನುವಾರ ರಾಯಬಾಗ ವಿಧಾನಸಭಾ ಕ್ಷೇತ್ರದ ಅಂಗವಿಕಲ ಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿ, ಅಂಗವಿಕಲರಿಗೆ ತ್ರಿಚಕ್ರ ವಾಹನ ಅನುಕೂಲವಾಗಲಿದೆ ಎಂದರು..ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಮಹಾದೇವ ಬೊರಗಾಂವೆ, ಸಂಗಣ್ಣ ದತ್ತವಾಡೆ, ಅರುಣ ಐಹೊಳೆ, ಮಹೇಶ ಕರಮಡಿ, ಸಂಜು ಕಾಂಬಳೆ, ಅಜಿತ ಮಾಂಗ, ಮೋಹನ ಪೂಜಾರಿ ಹಾಗೂ ಲಾನುಭವಿಗಳು ಇದ್ದರು.