

ಮ್ಯೂಸಿಯಂ ಆಕರ್ಷಣೆಸ್ವಾತಂತ್ರೃ
ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ ಜೀವನದ ಹಾದಿಯನ್ನು ಪರಿಚಯಿಸುವ ಮ್ಯೂಸಿಯಂಅನ್ನು ಟರ್ಮಿನಲ್ ಒಳಾಂಗಣದಲ್ಲಿ ನಿರ್ಮಿಸಲಾಗುತ್ತಿದೆ. ಪುಟ್ಟ ಉಬ್ಬುಶಿಲ್ಪಗಳು, ಸ್ತಬ್ಧಚಿತ್ರಗಳ ಮೂಲಕ ಚನ್ನಮ್ಮನ ಯುದ್ಧತರಬೇತಿ, ರಾಜ್ಯಭಾರ, ಬ್ರಿಟಿಷರೊಂದಿಗೆ ಹೋರಾಟ, ಸೆರೆಮನೆವಾಸ, ನಿಧನದವರೆಗಿನ ಜೀವನ ಚರಿತ್ರೆ ಇರಲಿದೆ. ಟರ್ಮಿನಲ್ ಹೊರಗೆ ಬೃಹತ್ ಪ್ರದರ್ಶನ ಗೋಡೆ ನಿರ್ಮಾಣವಾಗಲಿದ್ದು, ಜಿಲ್ಲೆಯ ಐತಿಹಾಸಿಕ, ಪ್ರವಾಸಿ ತಾಣಗಳನ್ನು ಗೋಡೆ ಚಿತ್ರದ ಮೂಲಕ ಪರಿಚಯಿಸಲಿದ್ದಾರೆ. ಇದಕ್ಕಾಗಿ ರಾಜ್ಯದ ಪ್ರಸಿದ್ಧ ಕಲಾವಿದರು ಕೆಲಸ ಮಾಡುತ್ತಿದ್ದಾರೆ.