ಅರಟಾಳ ಗ್ರಾಮದ ಶ್ರೀ ಮಾಳಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ರಂಗನಗೌಡ ಜಂಬಗಿ ಮತ್ತು ಉಪಾಧ್ಯಕ್ಷ ಮಲ್ಲಿಕಾರ್ಜುನ ತೆಲಸಂಗ ಅವರನ್ನು ಸನ್ಮಾನಿಸಲಾಯಿತು. ರಾಮಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ ಇತರರಿದ್ದರು.
Published on:
Copied
Follow Us
ಅರಟಾಳ: ಗ್ರಾಮದ ಶ್ರೀ ಮಾಳಿಂಗೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ರಂಗನಗೌಡ ಜಂಬಗಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ತೆಲಸಂಗ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ಸಭಾಭವನದಲ್ಲಿ ಈಚೆಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಎರಡು ಸ್ಥಾನಕ್ಕೆ ತಲಾ ಒಂದು ಅರ್ಜಿ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಾಹಕ ಪರಮಾನಂದ ಖ್ಯಾಡಿ ಘೋಷಣೆ ಮಾಡಿದರು.
ಸದಸ್ಯ ರಾಮಪ್ಪ ಪೂಜಾರಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಮಾಜಿ ಉಪಾಧ್ಯಕ್ಷ ಪಾಂಡಪ್ಪ ಮಾಂಗ, ಮಲಕು