ಶುಕ್ರವಾರ(ಫೆ.6) ಬೆಳಗ್ಗೆ 10ಕ್ಕೆ ವ್ಯಕ್ತಿತ್ವ ನಿರ್ಮಾಣ ಕುರಿತ ಯುವ ಸಮ್ಮೇಳನದಲ್ಲಿ ‘ನಮ್ಮ ಆಂತರಿಕ ಸಾಮರ್ಥ್ಯ ಅನ್ವೇಷಣೆ’ ಕುರಿತು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ, ‘ವ್ಯಕ್ತಿತ್ವ ನಿರ್ಮಾಣದಲ್ಲಿ ಧ್ಯಾನದ ಪ್ರಾಮುಖ್ಯ ಮತ್ತು ಅಭ್ಯಾಸ ವಿಧಾನ’ ಕುರಿತು ಸ್ವಾಮಿ ಮೋಕ್ಷಾತ್ಮನಾನಂದ, ‘ನವತಾರುಣ್ಯದ ಆಶಾಕಿರಣ ಸ್ವಾಮಿ ವಿವೇಕಾನಂದ’ ವಿಷಯವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು. ನಂತರ ಪ್ರಶ್ನೋತ್ತರ ಮತ್ತು ಸಂವಾದ ಇರಲಿದೆ.