ಸವದತ್ತಿ ಈದ್ಗಾ ಮೈದಾನದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಬಳಿಕ ಶಾಸಕ ವಿಶ್ವಾಸ ವೈದ್ಯ ಮುಸ್ಲಿಂ ಸಮುದಾಯದವರಿಗೆ ಶುಭಾಶಯ ವಿನಿಮಯ ಮಾಡಿದರು. ಮೌಲಾನಾ ಇಮ್ತಿಯಾಜ್, ಚಂದ್ರು ಶಾಮರಾಯನವರ, ಬಿ.ಎಂ.ಯಲಿಗಾರ ಇತರರಿದ್ದರು.
ಸವದತ್ತಿ: ನಗರದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಶನಿವಾರ ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಸ್ಥಳೀಯ ಈದ್ಗಾ ಮೈದಾನದಲ್ಲಿ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ರಂಜಾನ್ ಹಬ್ಬ ಸಹೋದರತ್ವ, ತ್ಯಾಗ ಮತ್ತು ಸೌಹಾರ್ದದ ಪ್ರತೀಕವಾಗಿದೆ. ಸಮಾಜದಲ್ಲಿ ಏಕತೆ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಗೆ ಹಬ್ಬಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಮೌಲಾನಾ ಇಮ್ತಿಯಾಜ್, ದೇಶದ ಶಾಂತಿ, ಸೌಹಾರ್ದ ಹಾಗೂ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಖಂಡರಾದ ಉದ್ಯಮಿ ಚಂದ್ರು ಶಾಮರಾಯನವರ, ಬಿ.ಎಂ.ಯಲಿಗಾರ, ಕೆ.ಕೆ.ಪುಣೇದ, ಲತೀಫ್ ಸವದತ್ತಿ, ಅಮೀರ್ ಗೋರಿನಾಯ್ಕ,